ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನ ಮತ್ತು ಕೆಎಸ್‌ಆರ್‌ಟಿಣಿ ಬಸ್ ನಡುವೆ ಡಿಕ್ಕಿ (Accident) ಸಂಭವಿಸಿ, ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಗುಂಡಮಗೆರೆ ಹೊರವಲಯದಲ್ಲಿ ಸಂಭವಿಸಿದೆ.
ಮೃತನನ್ನು ದೊಡ್ಡಬಳ್ಳಾಪುರದ ನಿವಾಸಿ 27 ವರ್ಷದ ಯುವಕ ಪುನಿತ್ ಕುಮಾರ್ ಎಂದು ಗುರುತಿಸಲಾಗಿದೆ.
ಮೃತನು ದ್ವಿಚಕ್ರ ವಾಹನದಲ್ಲಿ ಬಂಕೇನಹಳ್ಳಿ ಕಡೆಯಿಂದ ಬರುವ ವೇಳೆ ವಾಬಸಂದ್ರ-ಗುಂಡಮಗೆರೆ ನಡುವಿನ ತಿರುವಿನಲ್ಲಿ ಎದುರು ಬಂದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದು ಸಾವನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ
ಇನ್ನೂ ಏಕಾಏಕಿ ಎದುರಾದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ತಪ್ಪಿಸಲು ಕೆಎಸ್‌ಆರ್‌ಟಿಸಿ ಬಸ್ ಚಾಲಕ ಪ್ರಯತ್ನಿಸಿದ್ದು ಬಸ್ ರಸ್ತೆ ಬದಿಗೆ ನುಗ್ಗಿದೆ.
ಸ್ಥಳಕ್ಕೆ ಹೊಸಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.