Site icon Harithalekhani

ದೊಡ್ಡಬಳ್ಳಾಪುರ: ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಣೆ

Doddaballapur: Jagadguru Renukacharya Jayanti celebrations

Doddaballapur: Jagadguru Renukacharya Jayanti celebrations

ದೊಡ್ಡಬಳ್ಳಾಪುರ (Doddaballapura); ದೇಶದ ಪೇಟೆ ವೀರಶೈವ ಸಂಘದವರಿಂದ ಬುಧವಾರ ಶ್ರೀ ಜಗದ್ಗುರು ರೇಣುಕಾಚಾರ್ಯರವರ ಜಯಂತಿ ಪ್ರಯುಕ್ತ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿರುವ ಶ್ರೀ ರೇಣುಕಾಚಾರ್ಯರ ವಿಗ್ರಹ ಮೂರ್ತಿಗೆ ಅಭಿಷೇಕ ನಡೆಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಮಹಾಮಂಗಳಾರತಿ, ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ದೇಶದ ಪೇಟೆ ವೀರಶೈವ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ಮಹಿಳಾ ಅಕ್ಕಮಹಾದೇವಿ ಸಂಘ, ಬಸವೇಶ್ವರ ಯುವಕ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು.

Exit mobile version