Site icon Harithalekhani

Doddaballapura: ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ.. ಓರ್ವನ ಸ್ಥಿತಿ ಗಂಭೀರ

Doddaballapura: Head-on collision between two-wheelers.. One is in critical condition

Doddaballapura: Head-on collision between two-wheelers.. One is in critical condition

ದೊಡ್ಡಬಳ್ಳಾಪುರ: ತಾಲೂಕಿನ ಅಪಘಾತ (Accident) ಪ್ರಕರಣಗಳು ಸಂಖ್ಯೆ ಒಂದೇ ಸಮನೇ ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಇಂದು ಬೆಳಗ್ಗೆಯಿಂದ ದೊಡ್ಡಬಳ್ಳಾಪುರ ತಾಲೂಕಿನ ಮೂರು ಅಪಘಾತಗಳು ವರದಿಯಾಗಿದ್ದು, ಓರ್ವ ಸಾವನಪ್ಪಿದ್ದರೆ, ಹಲವರು ಗಾಯಗೊಂಡಿದ್ದಾರೆ.

ಇದೀಗ ಕೆಲವು ನಿಮಿಷಗಳ ಮುನ್ನ ನಗರದ ಭಗತ್ ಸಿಂಗ್ ಕ್ರೀಡಾಂಗಣ ಸಮೀಪದ ಸೋಮೇಶ್ವರ ಬಡಾವಣೆ ಬಳಿ ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ, ಸವಾರರು ತೀವ್ರವಾಗಿ ಗಾಯಗೊಂಡಿದ್ದಾರೆ.

ಕಲ್ಲನಾಯಕನಹಳ್ಳಿ ಯುವಕ ಸುಮಾರು 32 ವರ್ಷ ಗಂಭೀರವಾಗಿ ಗಾಯಗೊಂಡಿದ್ದರೆ, ಸೋಮೇಶ್ವರ ಬಡಾವಣೆಯ ನಿವಾಸಿ 25 ವರ್ಷದ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ.

ಮಿತಿಮೀರಿದ ವೇಗ, ಮೊಬೈಲ್ ಬಳಕೆ, ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದಾಗಿ ಅಪಘಾತ ಪ್ರಕರಣಗಳ ಸಂಖ್ಯೆ ತಾಲೂಕಿನಲ್ಲಿ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹೇಗೆ ಎಂಬ ಚಿಂತೆ ಸಾರ್ವಜನಿಕರ ಕಾಡುತ್ತಿದೆ.

Exit mobile version