Astrology: ಬುಧವಾರ, ಮಾರ್ಚ್ 12, 2025, ದೈನಂದಿನ ರಾಶಿ ಭವಿಷ್ಯ
ಮೇಷ ರಾಶಿ: ರಸ್ತೆಯಲ್ಲಿ ಪ್ರಯಾಣಿಸುವಾಗ ಸುರಕ್ಷತೆಯ ನಿಯಮವನ್ನು ಅನುಸರಿಸಿ. ಗೌರವದಿಂದ ಮಾತನಾಡಿಸುವುದು ತಾಳ್ಮೆಯಿಂದ ವರ್ತಿಸುವುದು ಒಳ್ಳೆಯದು. ನಿಮ್ಮ ಪ್ರೀತಿ ಪಾತ್ರರು ನಿಮ್ಮ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಒಂದು ಬಿಟ್ಟು ಹಲವಾರು ಕೆಲಸದ ಬಗ್ಗೆ ಯೋಚಿಸಿ. ಶ್ರಮ ವಹಿಸಿ ಕೆಲಸ ಮಾಡಿ. ಶೈಕ್ಷಣಿಕ ರಂಗಗಳಲ್ಲಿ ಉತ್ತಮ ದಿನವಾಗಿದೆ. (ಭಕ್ತಿಯಿಂದ ಶ್ರೀ ಗ್ರಾಮ ದೇವತೆ ದರ್ಶನ ಮಾಡಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ವೃಷಭ ರಾಶಿ: ಗ್ರಹಗಳ ಪ್ರಭಾವ ನಿಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸವಿರಲಿ. ನೀವು ನಿಮ್ಮನ್ನು ನಂಬಿದರೆ, ಇತರರು ನಿಮ್ಮನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ. (ಭಕ್ತಿಯಿಂದ ಶ್ರೀ ಬ್ರಾಹ್ಮೀ ದುರ್ಗಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಮಿಥುನ ರಾಶಿ: ನೀವು ಪಡೆದು ಕೊಳ್ಳುವ ಹೆಚ್ಚುವರಿ ಜ್ಞಾನವು ಇಂದು ಗೆಳೆಯರೊಂದಿಗೆ ವ್ಯವಹರಿಸಲು ಸಹಾಯ ಮಾಡುತ್ತದೆ. ಧಾರ್ಮಿಕ ಸ್ಥಳಕ್ಕೆ ಅಥವಾ ಸಂಬಂಧಿಕರಿಗೆ ಭೇಟಿ ನೀಡುವ ಸಾಧ್ಯತೆಯಿದೆ. ನೀವು ಪ್ರಯಾಣ ಮತ್ತು ಹಣವನ್ನು ಖರ್ಚು ಮಾಡುವ ಮನಸ್ಥಿತಿಯಲ್ಲಿರುತ್ತೀರಿ. (ಭಕ್ತಿಯಿಂದ ಶ್ರೀ ಮಾತಾ ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಕಟಕ ರಾಶಿ: ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ಇದರಿಂದ ಹೆಚ್ಚು ಉಳಿಸಲು ಸಹಾಯ ಮಾಡಬಹುದು. ನಿಮ್ಮ ಸಾಧನೆಯಿಂದ ಪೋಷಕರನ್ನು ಹೆಮ್ಮೆಪಡಿಸುವ ಸಾಧ್ಯತೆಯಿದೆ. ನಿಮ್ಮ ಆಸ್ತಿಯು ಬಹುಶಃ ಶೀಘ್ರದಲ್ಲೇ ನಿಮ್ಮ ಸ್ವಾಧೀನಕ್ಕೆ ಮರಳಲಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆವಹಿಸಿ. (ಭಕ್ತಿಯಿಂದ ಶ್ರೀ ಲಲಿತಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಸಿಂಹ ರಾಶಿ: ಪರಿಸ್ಥಿತಿಯನ್ನು ಬುದ್ಧಿವಂತಿಕೆಯಿಂದ ನಿಭಾಯಿಸಿ. ನಿಮ್ಮ ಆಲೋಚನೆಗಳು ಉತ್ತಮವೆಂದು ನೀವು ಊಹಿಸಬಹುದು. ಆದರೆ, ಎಲ್ಲರೂ ನಿಮ್ಮ ಹಾಗೆಯೇ ಆಲೋಚಿಸುವುದಿಲ್ಲ ಎಂಬುದು ತಿಳಿದುಕೊಳ್ಳಿ. (ಭಕ್ತಿಯಿಂದ ಶ್ರೀ ಕನ್ನಿಕಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಕನ್ಯಾ ರಾಶಿ: ನಿಮ್ಮ ಭಾವನೆಗಳು, ಆಲೋಚನೆಗಳನ್ನು ನಿಮ್ಮಲ್ಲೇ ಇಟ್ಟುಕೊಂಡಿದ್ದೀರಿ. ಪಾಲುದಾರರೊಂದಿಗೆ ವ್ಯವಹರಿಸಲು ಉತ್ತಮ ಮಾರ್ಗವೆಂದರೆ ಪ್ರತಿ ತಿರುವಿನಲ್ಲಿಯೂ ಅವರನ್ನು ಅಭಿನಂದಿಸುವುದು, ಉತ್ತಮ ವಿಚಾರಗಳನ್ನು ಹಂಚಿಕೊಳ್ಳಿ. ಇದರಿಂದ ಲಾಭ ನಿಮ್ಮ ಪಾಲಾಗಲಿದೆ. (ಭಕ್ತಿಯಿಂದ ಶ್ರೀ ಚೌಡೇಶ್ವರಿ ದೇವಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ತುಲಾ ರಾಶಿ: ಉದ್ಯೋಗದ ಬಗ್ಗೆ ನಿಮ್ಮ ಆಲೋಚನೆಯು ಸ್ಪಷ್ಟವಾಗಿರಲಿ. ಕೆಲಸ ಬದಲಾಯಿಸಲು ಒಳ್ಳೆಯ ದಿನ. ಕೆಲಸದಲ್ಲಿ ನಿಮ್ಮ ಆಲೋಚನೆಗಳನ್ನು ಪೂರ್ಣಗೊಳಿಸಲು ನೀವು ಮೇಲಧಿಕಾರಿಗಳ ಸಂಪೂರ್ಣ ಬೆಂಬಲವನ್ನು ಹೊಂದಿರುತ್ತೀರಿ. (ಭಕ್ತಿಯಿಂದ ಶ್ರೀ ಕುಲದೇವತೆ ಪ್ರಾರ್ಥನೆ ಮಾಡಿ ಒಳಿತಾಗುವುದು.)
ವೃಶ್ಚಿಕ ರಾಶಿ: ಇತರರೊಂದಿಗೆ ಉತ್ತಮ ಸಂಪರ್ಕ ಸಾಧಿಸಲು, ಉತ್ತಮ ಸಂಬಂಧ ಹೊಂದಲು ಇದು ಅತ್ಯುತ್ತಮ ದಿನವಾಗಿದೆ. ಕಡೆಗಣಿಸಿದ ಜನರು ಸಹಾಯದ ಮೊರೆ ಇಟ್ಟಾಗ ಕೈ ಹಿಡಿಯಿರಿ. ಮಾಡಿದ ಸಹಾಯಕ್ಕೆ ಪ್ರತಿ ಸಹಾಯ ಬಯಸುವುದು ಒಳ್ಳೆಯದಲ್ಲ. ಅನಿರೀಕ್ಷಿತ ಕ್ಷಣಗಳು ಎದುರಾಗಬಹುದು. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಶುಭ ವಾಗುವುದು.)
ಧನಸ್ಸು ರಾಶಿ: ಬದಲಾವಣೆಯ ದಿನವಿದು. ನಿಮಗೆ ಇಷ್ಟವಾದ ಕೆಲಸವನ್ನು ಮಾಡಿ. ದುಂದು ವೆಚ್ಚದಿಂದ ದೂರವಿರಿ. ಯೋಗ್ಯ ಕರವಾಗಿದೆಯೇ ಎಂಬುದನ್ನು ತಿಳಿದು ಭಾವನಾತ್ಮಕ ವಿಚಾರಗಳಿಗೆ ಹೆಚ್ಚು ಬೆಲೆ ನೀಡಿ. (ಭಕ್ತಿಯಿಂದ ಶ್ರೀ ಚಾಮುಂಡೇಶ್ವರಿ ದೇವಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಮಕರ ರಾಶಿ: ನೀವು ಊಹಿಸು ವುದಕ್ಕಿಂತ ಹೆಚ್ಚಿನದನ್ನು ನೀವು ಮಾಡುತ್ತಿದ್ದೀರಿ. ಎಲ್ಲಕ್ಕಿಂತ ಉತ್ತಮವಾಗಿ, ಸಮಯ ನಿಮ್ಮ ಕಡೆ ಇದೆ, ಇತರರೊಂದಿಗೆ ಮಾತಿನ ಚಕಮಕಿ ನಡೆಯಬಹುದು. ಪರಿಸ್ಥಿತಿಯನ್ನು ಉತ್ತವಾಗಿ ನಿಭಾಯಿಸಿ. (ಭಕ್ತಿಯಿಂದ ಶ್ರೀ ಶಾರದಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಕುಂಭ ರಾಶಿ: ವೃತ್ತಿಪರ ವಿಷಯಗಳಿಗಿಂತ ವೈಯಕ್ತಿಕ ವಿಷಯಗಳು ಹೆಚ್ಚು ಮುಖ್ಯವಾಗಬಹುದು, ಆದ್ದರಿಂದ ನೀವು ಕೆಲಸದಲ್ಲಿದ್ದರೂ ಕೂಡ ಕುಟುಂಬಸ್ಥರಿಗೆ ನಿಮ್ಮ ಸಮಯವನ್ನು ನೀಡಿ. ಮಕ್ಕಳಿಗೆ ಹೊಸ ಅವಕಾಶಗಳು ಹುಡುಕಿ ಬರಬಹುದು.(ಭಕ್ತಿಯಿಂದ ಶ್ರೀ ಕುಲದೇವತೆ ಪ್ರಾರ್ಥನೆ ಮಾಡಿ ಶುಭವಾಗುವುದು.)
ಮೀನ ರಾಶಿ: ಪ್ರವಾಸದಲ್ಲಿ ಪ್ರಯಾಣಿಸುವ ಅವಕಾಶ ಬಹುಶಃ ಕೆಲವರಿಗೆ ಸಿಗಲಿದೆ. ನಿಮ್ಮ ಸಂಪತ್ತು ಹೆಚ್ಚಾಗಬಹುದು. ವ್ಯವಹಾರದ ಸಮಯದಲ್ಲಿ ಲಾಭವು ನಿಮ್ಮ ಹಣಕಾಸಿನ ತೊಂದರೆಗಳನ್ನು ಅಳಿಸಿಹಾಕಲು ಭರವಸೆ ನೀಡುತ್ತದೆ. ನಿಮ್ಮ ಉದ್ಯೋಗದಲ್ಲಿ ಸಹಕಾರ ಸಿಗಲಿದೆ. (ಭಕ್ತಿಯಿಂದ ಶ್ರೀ ಅಷ್ಟ ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ ಒಳಿತಾಗುವುದು.)
ರಾಹುಕಾಲ: 12:00PM ರಿಂದ 01:30PM
ಗುಳಿಕಕಾಲ: 10:30AM ರಿಂದ 12:00PM
ಯಮಗಂಡಕಾಲ: 07:30AM ರಿಂದ 09:00AM