Harithalekhani

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಷ್ಟೇ ಘಾಟಿ ಸುಬ್ರಮಣ್ಯ ಕ್ಷೇತ್ರ ಅಭಿವೃದ್ಧಿ

Development of Ghati Subramanya is same as Kukke Subramanya

ಬೆಂಗಳೂರು; ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಘಾಟಿ ಸುಬ್ರಮಣ್ಯ (Ghati Subramanya) ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆಹೆಚ್ ಮುನಿಯಪ್ಪ, ಘಾಟಿ ಸುಬ್ರಮಣ್ಯ ಕ್ಷೇತ್ರ ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ಪುಣ್ಯಕ್ಷೇತ್ರ ವಾಗಿದ್ದು ಇಲ್ಲಿ ಹೆಚ್ಚಿನ ಮೂಲಸೌಕರ್ಯಗಳನ್ನು ಕಲ್ಪಿಸುವುದರೊಂದಿಗೆ ಪ್ರಾಧಿಕಾರದ ವತಿಯಿಂದ ಹೆಚ್ವಿನ ಅಭಿವೃದ್ಧಿ ಮಾಡಬೇಕೆಂದರು.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ದಸ್ಟೆ ಈ ಭಾಗವು ಅಭಿವೃದ್ಧಿ ಮಾಡಬೇಕು‌, ಪ್ರತಿವರ್ಷ ನಡೆಯುವ ಧನಗಳ ಜಾತ್ರೆ ವಿಶೇಷವಾಗಿದ್ದು ನೀರಿನ ವ್ಯವಸ್ಥೆ, ಕಲ್ಯಾಣ ಮಂಟಪ,ಅನ್ನದಾಸೋಹ ಭವನ ಒಮ್ಮೆ ಗೆ 5 ಸಾವಿರ ಜನರು ಊಟ ಮಾಡಲು ಅನಿಕೂಲಕರವಾದ ಭವನ ನಿರ್ಮಾಣದ ಕುರಿತು ಸಭೆಯಲ್ಲಿ ಚರ್ಚಿಸಿದರು.

ಈ ಭಾಗಕ್ಕೆ ರಸ್ತೆಯ ಅಗಲೀಕರಣದೊಂದಿಗೆ ಡಬಲ್ ರಸ್ತೆಯ ಅಭಿವೃದ್ಧಿ ಮಾಡುವುದರೊಂದಿಗೆ
ಕ್ಷೇತ್ರದ ಮೂಲಸೌಕರ್ಯಗಳ ಅಭಿವೃದ್ಧಿಯು ನೂರು ವರ್ಷಗಳಿಗೆ ಅನುಕೂಲಕರವಾದ ಯೋಜನೆಯನ್ನು ರೂಪಿಸಿ ನಿರ್ಮಾಣ ಮಾಡಬೇಕಿದೆ ಎಂದರು.

ಈ ಕ್ಷೇತ್ರವು ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುವಂತೆ ಅಭಿವೃದ್ಧಿ ಮಾಡಲು ಕಾರ್ಯೋನ್ಮುಕರಾಗಬೇಕೆಂದರು.

ಸಭೆಯಲ್ಲಿ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಮುಜರಾಯಿ ಇಲಾಖೆ ಆಯುಕ್ತರಾದ ವೆಂಕಟೇಶ್, ಬೆ.ಗ್ರಾ.ಜಿಲ್ಲಾಧಿಕಾರಿ ಬಸವರಾಜ್, ಕಂದಾಯ ಇಲಾಖೆಯ ಕಾರ್ಯದರ್ಶಿ ರಾಜೇಂದ್ರ ಖಠಾರಿಯಾ, ಆಹಾರ ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಅನುರಾಧ, ಘಾಟಿ ಸುಬ್ರಮಣ್ಯ ಪ್ರಾಧಿಕಾರದ ರಂಗಪ್ಪ, ಜಿಲ್ಲಾ‌ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ರಾಜಣ್ಣ,ಪ್ರಾಧಿಕಾರದ ಸದಸ್ಯರಾದ ಮಹೇಶ್, ಹಾಗೂ ದೇವಸ್ಥಾನ ದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಅರ್ಚಕರು ಉಪಸ್ಥಿತರಿದ್ದರು.

Exit mobile version