Site icon Harithalekhani

ರೈತರ ಗಮನಕ್ಕೆ: ದೊಡ್ಡಬಳ್ಳಾಪುರದ ರಾಗಿ ಖರೀದಿ ಕೇಂದ್ರ ಸ್ಥಳಾಂತರ

Relocation of millet buying center in Doddaballapur

Relocation of millet buying center in Doddaballapur

ಬೆಂ.ಗ್ರಾ.ಜಿಲ್ಲೆ: 2024-25ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯಡಿ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಈಗಾಗಲೇ ನೋಂದಣಿಯಾದ ರೈತರಿಂದ ರಾಗಿಯನ್ನು ಖರೀದಿಸಲು
ರಾಗಿ ಖರೀದಿ ಕೇಂದ್ರವನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಗೋದಾಮು, ಸರ್ಕಾರಿ ಆಸ್ಪತ್ರೆ ಹಿಂಭಾಗ, ಚಿಕ್ಕಬಳ್ಳಾಪುರ ರಸ್ತೆ, ದೊಡ್ಡಬಳ್ಳಾಪುರ ತಾಲ್ಲೂಕು ಇಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರು ತಿಳಿಸಿದ್ದಾರೆ.

ದೊಡ್ಡಬಳ್ಳಾಪುರದ ನೊಂದಾಯಿತ ರೈತರು ಸ್ಥಳಾಂತರಿಸಲಾದ ರಾಗಿ ಖರೀದಿ ಕೇಂದ್ರದಲ್ಲಿ ರಾಗಿಯನ್ನು ತಂದು ಮಾರಾಟ ಮಾಡಬಹುದಾಗಿದೆ.

ಈ ಹಿಂದೆ ದೊಡ್ಡಬಳ್ಳಾಪುರ ತಾಲ್ಲೂಕಿನ ಗುಂಡಮಗೆರೆ ಕ್ರಾಸ್ ನ ಕೆ.ಎಸ್.ಡಬ್ಲು.ಸಿ ಘಟಕ-2 ಅಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲಾಗಿತ್ತು. ಈ ಉಗ್ರಾಣ ಕೇಂದ್ರದಲ್ಲಿ ರಾಗಿಯ ಜೊತೆಗೆ ಭಾರತ ಆಹಾರ ನಿಗಮದ ಅಕ್ಕಿ ಸರಕು ಸಂಗ್ರಹಿಸಿದ್ದು ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ ಹೆಚ್ಚುವರಿ ಅಕ್ಕಿಯನ್ನು ವಿವಿಧ ಸಗಟು ಮಳಿಗೆಗಳಿಗೆ ಎತ್ತುವಳಿ ಮಾಡಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರದ ಎರಡು ಯೋಜನೆಗಳಿಗೆ ಅನುಕೂಲವಾಗುವಂತೆ ರಾಗಿ ಖರೀದಿ ಕೇಂದ್ರವನ್ನು ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version