Site icon Harithalekhani

SSLC ವಿದ್ಯಾರ್ಥಿಗಳಿಗೆ ನಾಳೆ ದೊಡ್ಡಬಳ್ಳಾಪುರದಲ್ಲಿ ಉತ್ತೇಜನ ಕಾರ್ಯಕ್ರಮ.. ಗುರುರಾಜ ಕರ್ಜಗಿ ಭಾಗಿ

Encouragement program for SSLC students tomorrow at Doddaballapura

Encouragement program for SSLC students tomorrow at Doddaballapura

ದೊಡ್ಡಬಳ್ಳಾಪುರ ( Doddaballapura): 2024-25 ನೆಯ ಸಾಲಿನ SSLC ವಿದ್ಯಾರ್ಥಿಗಳಿಗೆ ತಾಲ್ಲೂಕು ಮಟ್ಟದಲ್ಲಿ ಪರೀಕ್ಷಾ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಅದರಂತೆ ನಾಳೆ (ಮಾ. 11) ರಂದು ಮಂಗಳವಾರ ಇಲ್ಲಿನ ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಆರ್‌ಎಲ್ ಜಾಲಪ್ಪ ಕಲಾ ಮಂದಿರದಲ್ಲಿ “ಉತ್ತೇಜನಾ ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ಮುಖ್ಯ ಪ್ರೇರಕರಾಗಿ ಪ್ರಸಿದ್ಧ ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಭಾಗವಹಿಸುತ್ತಿದ್ದಾರೆ.

ಈ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ 67 ಪ್ರೌಢಶಾಲೆಗಳಿಂದ ಸುಮಾರು 2500 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.

ತಾಲ್ಲೂಕಿನ ಎಲ್ಲಾ SSLC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುವಂತೆ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಸಯೀದಾ ಅನೀಸ್ ಮನವಿ ಮಾಡಿದ್ದಾರೆ.

Exit mobile version