Harithalekhani

Doddaballapura: MSV ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಕಲಾ ಪ್ರದರ್ಶನ

Doddaballapura: Science Material Exhibition and Art Exhibition at MSV Public School

ದೊಡ್ಡಬಳ್ಳಾಪುರ; ನಗರದ ಪ್ರತಿಷ್ಠಿತ ಶಾಲೆಯಾದ MSV ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಮಾದರಿಗಳ ಪ್ರದರ್ಶನವು ಮಕ್ಕಳ ಕ್ರಿಯಾಶೀಲತೆಗೆ ಸಾಕ್ಷಿಯಾಗಿತ್ತು. ವಿಜ್ಞಾನ ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳು ಮಾದರಿಗಳನ್ನು ತಯಾರಿಸಿದ್ದರು.

ಕಲಾ ಶಿಕ್ಷಕರಾದ ಲೋಕೇಶ್ ಬಿ.ಪಿ ಮತ್ತು ದೀಪಾ ಅವರ ಮಾರ್ಗದರ್ಶನದಲ್ಲಿ, ವಿದ್ಯಾರ್ಥಿಗಳ ಕುಂಚದಲ್ಲಿ ಮೂಡಿಬಂದ ವಿವಿಧ ಚಿತ್ತಾರಗಳ ಕಲಾ ಪ್ರದರ್ಶನವನ್ನೂ ಸಹ ಏರ್ಪಡಿಸಿದ್ದು, ಮಕ್ಕಳ ಆಸಕ್ತಿಗೆ ಹಿಡಿದ ಕನ್ನಡಿಯಾಗಿತ್ತು.

5 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.

ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ ಪ್ರಾಂಶುಪಾಲರಾದ ರೆಮ್ಯ ಬಿ.ವಿ. “ಮಕ್ಕಳ ಮನಸ್ಸು ಬಹುಬೇಗ ಆಸಕ್ತಿ ಮತ್ತು ಕುತೂಹಲಕ್ಕೆ ಒಳಗಾಗುತ್ತದೆ. ಪಠ್ಯದ ವಿಷಯಗಳು ಎಷ್ಠೇ ಬಾರಿ ಓದಿದರೂ ಸುಲಭವಾಗಿ ಅರ್ಥವಾಗುವುದಿಲ್ಲ ಆದರೆ ಇಂತಹ ಪ್ರದರ್ಶನಗಳು ಸುಲಭ ವಿಷಯ ಗ್ರಹಿಕೆಗೆ ಸಹಕಾರಿಯಾಗುತ್ತದೆ.” ಎಂದು ತಿಳಿಸಿದರು.

ಶಾಲಾ ಅಧ್ಯಕ್ಷ ಎ ಸುಬ್ರಮಣ್ಯ ಮಾತನಾಡಿ, “ವಸ್ತು ಪ್ರದರ್ಶನದ ಹಿಂದೆ ಪೋಷಕರು, ಮಕ್ಕಳು ಹಾಗೂ ಶಿಕ್ಷಕರ ಆಸಕ್ತಿ ಇದೆ ಮತ್ತು ಈ ವಸ್ತು ಪ್ರದರ್ಶನ ಶಿಕ್ಷಣದ ಒಂದು ಭಾಗವಾಗಿ ರೂಪುಗೊಂಡಿದೆ” ಎಂದರು.

ಈ ವೇಳೆ ಶಾಲೆಯ ಉಪ ಪ್ರಾಂಶುಪಾಲರಾದ ಪ್ರತಿಮಾ ಪೈ ಹಾಗೂ ಶಿಕ್ಷಕ ವೃಂದ ಪಾಲ್ಗೊಂಡಿದ್ದರು.

Exit mobile version