Doddaballapur: Karaway warning to toll agency to pay attention to safety

ದೊಡ್ಡಬಳ್ಳಾಪುರದಲ್ಲಿ ಮಿತಿಮೀರಿದ ಅಪಘಾತ.. ಟೋಲ್ ಸಂಸ್ಥೆಗೆ ಕರವೇ ವಾರ್ನಿಂಗ್

ದೊಡ್ಡಬಳ್ಳಾಪುರ (Doddaballapura); ಟೋಲ್ ಸಿಬ್ಬಂದಿಗಳು ಕೇವಲ ಹಣ ಸಂಗ್ರಕ್ಕೆ ಸೀಮಿತವಾಗದೆ, ವಾಹನ ಸವಾರರ ಸುರಕ್ಷತೆ ಕಡೆಗೂ ಬೇರೆ ಹೆಚ್ಚು ಒತ್ತು ನೀಡುವಂತೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಪದಾಧಿಕಾರಿಗಳು ಹುಲಿಕುಂಟೆ ಟೋಲ್ ಸಿಬ್ಬಂದಿಗಳಿಗೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ, ದೊಡ್ಡಬಳ್ಳಾಪುರ ತಾಲೂಕಿನ‌ ರಘುನಾಥಪುರದಿಂದ ದಾಬಸ್ ಪೇಟೆ ವರೆಗೆ ಟೋಲ್ ರಸ್ತೆ ನಿರ್ಮಿಸಿದ್ದು, ಟೋಲ್ ಸಂಗ್ರಹ ಕೂಡ ಮಾಡುತ್ತಿದ್ದೀರಿ.. ಆದರೆ ಇತ್ತೀಚಿನ ದಿನಗಳಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಮಿತಿಮೀರಿ ವಾಹನಗಳು ಅಪಘಾತಕ್ಕಿಡಾಗುತ್ತಿವೆ.

ಕಳೆದೊಂದು ವಾರದಲ್ಲಿ ಸುಮಾರು ಐದು ವಾಹನಗಳು ಅಪಘಾತಕ್ಕೀಡಾಗಿವೆ ಸುಮಾರು ಹದಿನೈದಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಆದರೆ ನೀವು ಯಾವುದೇ ಪರಿಶೀಲನೆ ನಡೆಸದೆ ಅಪಘಾತ ತಡೆಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದೀರಿ, ಅಪಘಾತ ವಲಯದಲ್ಲಿ ಆಂಬ್ಯೂಲೆನ್ಸ್ ಸೇವೆ ಕೂಡ ಸಮರ್ಪಕವಾಗಿ ಒದಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೆ ಹೆದ್ದಾರಿ ಅಭಿವೃದ್ಧಿ ಅಧಿಕಾರಿಗಳು, ಪೋಲಿಸ್ ಇಲಾಖೆಯ ಜೊತೆಯಲಿ ರಸ್ತೆ ಪರಿಶೀಲಿಸಿ, ಅಪಘಾತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ನಿಮ್ಮ ಟೋಲ್ ಸಂಗ್ರಹ ಕೇಂದ್ರಕ್ಕೆ ಸ್ಥಳೀಯ ಸಾರ್ವಜನಿಕರೊಂದಿಗೆ ಮುತ್ತಿಗೆ ಹಾಕಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮನವಿ ಪತ್ರ ಸ್ವೀಕರಿದ ಟೋಲ್ ಪ್ಲಾಜಾ ವ್ಯವಸ್ಥಾಪಕ ಪ್ರಶಾಂತ್ ಪ್ರತಿಕ್ರಿಯೆ ನೀಡಿ, ಈ ಕುರಿತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಅಧಿಕಾರಿಗಳಿಗೆ ಮಾಹಿತಿ ನೀಡಿ, ತ್ವರಿತವಾಗಿ ಕ್ರಮಕೈಗೊಳ್ಳಲಾಗುವುದು ಎಂದರು.

ಈ ವೇಳೆ ಮುಖಂಡರಾದ ನವೀನ್, ಮೋಹನ್, ಫಯಾಝ್, ರಘು, ಮಂಜು, ಸಮೀರ್ ಮತ್ತಿತರರಿದ್ದರು

ರಾಜಕೀಯ

ತೆರಿಗೆ ಹಣ ಪೋಲು ನಾಚಿಕೆಗೇಡಿನ ವಿಚಾರ: ಬಿ.ವೈ.ವಿಜಯೇಂದ್ರ

ತೆರಿಗೆ ಹಣ ಪೋಲು ನಾಚಿಕೆಗೇಡಿನ ವಿಚಾರ: ಬಿ.ವೈ.ವಿಜಯೇಂದ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ರಚಿಸಿ ರಾಜ್ಯದ ಜನರ ತೆರಿಗೆ ಹಣವನ್ನು ಈ ಸಮಿತಿಗೆ ಸಂಬಳವಾಗಿ ನೀಡುತ್ತಿರುವುದು ನಾಚಿಗೆಗೇಡಿನ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ

[ccc_my_favorite_select_button post_id="104018"]
ಕೇಂದ್ರಕ್ಕೆ ಮಹತ್ವದ ವಿವಿಧ ಬೇಡಿಕೆಗಳನ್ನಿಟ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ಕೇಂದ್ರಕ್ಕೆ ಮಹತ್ವದ ವಿವಿಧ ಬೇಡಿಕೆಗಳನ್ನಿಟ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ನವದೆಹಲಿ: ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮೈಸೂರು ಮತ್ತು ಧಾರವಾಡ ವಿವಿಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಕೇಂದ್ರ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ (HD Deve Gowda) ಅವರು ಮನವಿ

[ccc_my_favorite_select_button post_id="103998"]
ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದರೂ ಇನ್ಸೂರೆನ್ಸ್ ಕಂಪನಿ ವಿಮೆ ಪಾವತಿಸಬೇಕು: ಹೈಕೋರ್ಟ್

ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದರೂ ಇನ್ಸೂರೆನ್ಸ್ ಕಂಪನಿ ವಿಮೆ ಪಾವತಿಸಬೇಕು: ಹೈಕೋರ್ಟ್

ಚೆನ್ನೈ (High court judgment): ಅಪಘಾತದ ಸಂದರ್ಭದಲ್ಲಿ ಚಾಲಕ ನಿಯಮಗಳನ್ನು ಗಾಳಿಗೆ ತೂರಿ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ್ದರೂ ಸಂತ್ರಸ್ತರಿಗೆ ವಿಮೆ ಪರಿಹಾರ ಪಾವತಿಸುವ ಹೊಣೆ ವಿಮಾ ಸಂಸ್ಥೆಯ ಮೇಲಿರುತ್ತದೆ. ಚಾಲಕ ಕುಡಿದ ಮತ್ತಿನಲ್ಲಿ

[ccc_my_favorite_select_button post_id="103668"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

Champions Trophy; ಭಾರತದ ಮುಡಿಯೇರಿದ ಚಾಂಪಿಯನ್ಸ್ ಟ್ರೋಫಿ

Champions Trophy; ಭಾರತದ ಮುಡಿಯೇರಿದ ಚಾಂಪಿಯನ್ಸ್ ಟ್ರೋಫಿ

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು (Champions Trophy) ತನ್ನದಾಗಿಸಿಕೊಂಡಿದೆ. ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಕೀವಿಸ್ ಪಡೆ 50 ಓವರ್‌ಗಳಲ್ಲಿ 7

[ccc_my_favorite_select_button post_id="103912"]
ಅತ್ತೆ-ಸೊಸೆ ಜಗಳ: ತಾಯಿ, ಮಗ ಆತ್ಮಹತ್ಯೆ

ಅತ್ತೆ-ಸೊಸೆ ಜಗಳ: ತಾಯಿ, ಮಗ ಆತ್ಮಹತ್ಯೆ

ಹಾಸನ: ಕೌಟುಂಬಿಕ ಕಲಹ ಹಿನ್ನೆಲೆ ಕೆರೆಗೆ ಹಾರಿ ತಾಯಿ-ಮಗ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಬ್ಬಳಿ ಗ್ರಾಮದಲ್ಲಿ ನಡೆದಿದೆ. ಜಯಂತಿ (60 ವರ್ಷ), ಭರತ್ (35 ವರ್ಷ) ಆತ್ಮಹತ್ಯೆಗೆ ಶರಣಾದ ತಾಯಿ-ಮಗ ಎಂದು ಗುರುತಿಸಲಾಗಿದೆ. ಭರತ್ ಕಳೆದ

[ccc_my_favorite_select_button post_id="104008"]
ಘಾಟಿ ಬಳಿ ಅಪಘಾತ.. ಮೊಪೆಡ್ ಸವಾರನಿಗೆ ಪೆಟ್ಟು

ಘಾಟಿ ಬಳಿ ಅಪಘಾತ.. ಮೊಪೆಡ್ ಸವಾರನಿಗೆ ಪೆಟ್ಟು

ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಬಳಿ ಕಾರು ಮತ್ತು ಮೊಪೆಡ್ ನಡುವೆ ಡಿಕ್ಕಿ (Accident) ಸಂಭವಿಸಿ, ಮೊಪೆಡ್ ಸವಾರ ಗಾಯಗೊಂಡಿದ್ದಾನೆ. ಘಾಟಿ ಕ್ಷೇತ್ರದ ಸುಂಕ ವಸೂಲಿ ಕೇಂದ್ರದ ಬಳಿ

[ccc_my_favorite_select_button post_id="104015"]

ಆರೋಗ್ಯ

ಸಿನಿಮಾ

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ತುಮಕೂರು: ಬೆಂಗಳೂರು ನಡೆದ ಅಂತರರಾಷ್ಟ್ರೀಯ ಫಿಲಂ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಗೈರಾದ ಖ್ಯಾತ ನಟ, ನಟಿಯರ ಕುರಿತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಚಿತ್ರರಂಗದವರ ನಟ್ಟು ಬೋಲ್ಟು ಟೈಟು ಮಾಡುತ್ತೇನೆ ಎಂದು

[ccc_my_favorite_select_button post_id="103709"]
error: Content is protected !!