Astrology: ಭಾನುವಾರ, ಮಾರ್ಚ್ 09, 2022, ದೈನಂದಿನ ರಾಶಿ ಭವಿಷ್ಯ
ಮೇಷ ರಾಶಿ: ಧನಾತ್ಮಕ ಚಿಂತನೆಯಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು. ಬಂಧುಗಳಿಂದ ಸುವಾರ್ತೆ ಕೇಳುವಿರಿ. (ಭಕ್ತಿಯಿಂದ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ವೃಷಭ ರಾಶಿ: ಸಂಸಾರದಲ್ಲಿ ಏರುಪೇರು ಸಹಜ. ಆದರೆ ಅದೇ ಜೀವನವಲ್ಲ. ಹಾಗಾಗಿ ಇಂದಿನ ಸೋಲು ನಾಳಿನ ಗೆಲುವು ಎಂಬ ವಿಶ್ವಾಸದಿಂದ ಮುನ್ನೆಡೆದಲ್ಲಿ ಒಳಿತಾಗುವುದು. ಮಹತ್ತರ ಕಾರ್ಯಗಳನ್ನು ಮುಂದೂಡಿರಿ. ಹಣವು ನೀರಿನಂತೆ ಖರ್ಚಾಗುವ ಸಾಧ್ಯತೆ. (ಭಕ್ತಿಯಿಂದ ಶ್ರೀ ಮಂಜುನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಮಿಥುನ ರಾಶಿ: ಈ ದಿನ ನೀವಾಡುವ ಮಾತಿಗೆ ಹೆಚ್ಚು ಬೆಲೆ ಸಿಗುವುದು. ಎಲ್ಲರೂ ನಿಮ್ಮನ್ನು ಕೊಂಡಾಡುವರು. ಮನೋರಥ ಈಡೇರುವುದು. ಕೌಟುಂಬಿಕವಾಗಿ ನೆಮ್ಮದಿಯ ದಿನ. ಬೆಲೆಯುಳ್ಳ ವಸ್ತುಗಳ ಖರೀದಿಗೆ ಮನಸು ಮಾಡುವಿರಿ. (ಭಕ್ತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಕಟಕ ರಾಶಿ: ವ್ಯಾಪಾರಸ್ಥರಿಗೆ ಅಧಿಕ ಲಾಭಾಂಶ ಬರುವುದು. ಧಾರ್ಮಿಕ ವಿಷಯಗಳ ಬಗ್ಗೆ ಸದ್ಭಾವನೆ ಮೂಡುವುದು. ದೈವಾನುಕೂಲತೆಯಿಂದ ಇಚ್ಛಿಸಿದ ಕಾರ್ಯಗಳು ನೆರವೇರುವುದು. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಶುಭವಾಗುವುದು.)
ಸಿಂಹ ರಾಶಿ: ಉದಾಸಿನವೇ ಅಧೋಗತಿಗೆ ಮೂಲ ಎಂದರು ಹಿರಿಯರು. ಈ ದಿನ ಕೆಲಸ ಕಾರ್ಯಗಳಲ್ಲಿ ಉದಾಸಿನ ತೋರಿದರೆ ಭಾರಿ ಪ್ರಮಾಣದ ದಂಡ ತೆರಬೇಕಾಗುವುದು. ಸಂಗಾತಿಯ ಸಲಹೆಯನ್ನು ಆಧರಿಸಿ ಕಾರ್ಯಕ್ರಮ ರೂಪಿಸಿಕೊಳ್ಳಿ, ಒಳಿತಾಗುವುದು. (ಭಕ್ತಿಯಿಂದ ಶ್ರೀ ಕಾಲಭೈರವೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಕನ್ಯಾ ರಾಶಿ: ಹಮ್ಮಿಕೊಂಡ ಕಾರ್ಯಗಳು ಯಶಸ್ಸಿನತ್ತ ಸಾಗುವವು. ವಾದ ಸ್ಪರ್ಧೆಯಲ್ಲಿ ಜಯ ವಿದ್ಯಾಬುದ್ಧಿಯಲ್ಲಿ ಯಶಸ್ಸು. ಸಮಾಜದಲ್ಲಿ ಮಾನ ಸನ್ಮಾನಗಳು ಏರ್ಪಡುವ ಸಾಧ್ಯತೆ. ಕೆಲವರಿಗೆ ವಿದೇಶ ಪ್ರವಾಸ ಹೋಗುವ ಸಾಧ್ಯತೆ ಇರುವುದು. (ಭಕ್ತಿಯಿಂದ ಶ್ರೀ ಉಗ್ರ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ತುಲಾ ರಾಶಿ: ಸ್ತ್ರೀ ಸಂಬಂಧ ವಿಷಯದಲ್ಲಿ ಅನಗತ್ಯ ಮೂಗು ತೂರಿಸದಿರಿ. ಗಾಳಿಗುದ್ದಿ ಮೈ ನೋಯಿಸಿ ಕೊಂಡಂತೆ ಈ ದಿನ ವಿಚಾರಗಳಲ್ಲಿ ಹೆಚ್ಚಿನ ಶುಭ ಹೊಂದಲಾಗುವುದಿಲ್ಲ. ಸ್ನೇಹಿತನ ಸಹಕಾರ ಪಡೆಯಿರಿ ಮತ್ತು ಕುಲ ದೇವತಾ ಪ್ರಾರ್ಥನೆ ಮಾಡಿ. (ಭಕ್ತಿಯಿಂದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು)
ವೃಶ್ಚಿಕ ರಾಶಿ: ಕೋರ್ಟು ಕಚೇರಿ ಕೆಲಸಗಳಲ್ಲಿ ಜಯ ದೊರೆಯುವುದು. ಹಣಕಾಸಿನ ತೊಂದರೆ ಇರುವುದಿಲ್ಲ. ವೃತ್ತಿಪರರಿಗೆ ಸ್ವಲ್ಪ ವಿಶ್ರಾಂತಿಯ ಅಗತ್ಯವಿದೆ. ಹಿರಿಯರ ಸಲಹೆ- ಸಹಕಾರಗಳನ್ನು ಪಡೆಯಿರಿ. (ಭಕ್ತಿಯಿಂದ ಶ್ರೀ ಕಾಶೀ ವಿಶ್ವನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಧನಸ್ಸು ರಾಶಿ: ಗ್ರಹಗತಿಗಳು ನಿಮ್ಮ ನಡೆಯನ್ನು ಪರೀಕ್ಷಿಸುತ್ತಿರುವವು. ಹಾಗಾಗಿ
ಪ್ರತಿಯೊಂದು ಕಾರ್ಯದಲ್ಲೂ ಎಚ್ಚರಿಕೆಯಿಂದಿರಿ. ಲೆಕ್ಕಪತ್ರ ಗಳನ್ನು ಸರಿಯಾಗಿಡಿ. ಇದರಿಂದ ಮೇಲಧಿಕಾರಿಗಳ ಪ್ರೀತಿಗೆ ಪಾತ್ರರಾಗುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. (ಭಕ್ತಿಯಿಂದ ಶ್ರೀ ಉಮಾ ಮಹೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಮಕರ ರಾಶಿ: ಅಮೂಲ್ಯ ವಸ್ತುವಿನ ಖರೀದಿ-ವಿಕ್ರಯದಿಂದ ಲಾಭವಾಗುವುದು. ವಿರೋಧಿಗಳಿಗೆ ಸೋಲು ಉಂಟಾಗುವುದು. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು ಮತ್ತು ಮಗನ ಭವಿಷ್ಯದ ಕುರಿತು ಚಿಂತೆ ಕಾಡುವುದು. (ಭಕ್ತಿಯಿಂದ ಶ್ರೀ ಕುಲದೇವರ ಪ್ರಾರ್ಥನೆ ಮಾಡಿ ಶುಭವಾಗುವುದು.)
ಕುಂಭ ರಾಶಿ: ಕೆಲವು ಘಟನೆಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಮಿತ್ರರ ಸಹಕಾರವೂ ದೊರೆಯಲಿದ್ದು ಈ ದಿನ ನಿಮಗೆ ಮಂಗಳವನ್ನು ಉಂಟುಮಾಡುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. (ಭಕ್ತಿಯಿಂದ ಶ್ರೀ ಮೃತ್ಯುಂಜಯ ರುದ್ರ ದೇವರ ಪ್ರಾರ್ಥನೆ ಮಾಡಿ ಶುಭವಾಗುವುದು.)
ಮೀನ ರಾಶಿ: ಪರಾಕ್ರಮ ಕೆಲಸ ಕಾರ್ಯಗಳಲ್ಲಿ ಜಯ. ಮಹತ್ವದ ಪತ್ರ ಕೈಸೇರುವುದು. ಉದ್ಯೋಗ, ವ್ಯವಹಾರಗಳಲ್ಲಿ ಉತ್ಕರ್ಷ. ಬಂಧು ಬಳಗದವರ ಭೇಟಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. (ಭಕ್ತಿಯಿಂದ ಶ್ರೀ ಅರ್ಧನಾರೀಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ರಾಹುಕಾಲ: 04:30 ರಿಂದ 06:00
ಗುಳಿಕಕಾಲ: 03:00 ರಿಂದ 04:30
ಯಮಗಂಡಕಾಲ: 12:00 ರಿಂದ 01:30