Site icon Harithalekhani

ಪೊಲೀಸರಿಂದ 5K ಮ್ಯಾರಥಾನ್.. ನಟ ಧ್ರುವ ಸರ್ಜಾ ಚಾಲನೆ

5K Marathon by Police.. Actor Dhruva Sarja Run

5K Marathon by Police.. Actor Dhruva Sarja Run

ಬೆಂಗಳೂರು (Druva sarja): ಗ್ರಾಮಾಂತರ ಜಿಲ್ಲಾ ಪೊಲೀಸ್ ವತಿಯಿಂದ ಸದೃಢ ಆರೋಗ್ಯ ಮತ್ತು ಡ್ರಗ್ಸ್ ಮುಕ್ತ ಕರ್ನಾಟಕ ಕಾರ್ಯಕ್ರಮದ ಅಂಗವಾಗಿ 5K ಮ್ಯಾರಥಾನ್ ಅನ್ನು ರಾಜನುಕುಂಟೆಯ ಖಾಸಗಿ ಯೂನಿವರ್ಸಿಟಿ ಆವರಣದಲ್ಲಿ ಆಯೋಜಿಸಲಾಗಿತ್ತು.

5K ಮ್ಯಾರಥಾನ್ ಅನ್ನು ನಟ ಧ್ರುವ ಸರ್ಜಾ ಚಾಲನೆ ನೀಡಿದರು.

ಖಾಸಗಿ ಯೂನಿವರ್ಸಿಟಿ ಆವರಣದಿಂದ ಪ್ರಾರಂಭವಾದ ಮ್ಯಾರಥಾನ್ ಇಟ್ಕಲ್ ಪುರ ಗ್ರಾಮದ ಸರ್ಕಾರಿ ಶಾಲೆ, ನೆಲಮಂಗಲ ಮುಖ್ಯ ರಸ್ತೆಯಲ್ಲಿ ಬಂದು ಖಾಸಗಿ ಯೂನಿವರ್ಸಿಟಿ ಬಳಿ ಮುಕ್ತಾಯಗೊಂಡಿತು.

ಮ್ಯಾರಥಾನ್ ನಲ್ಲಿ ನಟ ಶ್ರೀಮುರಳಿ, ನಟಿ ಮಾಳವಿಕಾ ಕಾಮತ್, ನಟಿ ಸ್ಫೂರ್ತಿ ಉಡಿಮನೆ, ಅಂತರರಾಷ್ಟ್ರೀಯ ಯೋಗ ಪಟು ಭಾಗೀರಥಿ, ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಜಿ.ಪಂ ಸಿಇಒ ಡಾ.ಕೆ.ಎನ್‌.ಅನುರಾಧಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ.

ನಿರೂಪಕ ಅಕುಲ್ ಬಾಲಾಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಾಗೇಶ್ ಕುಮಾರ್. ಕೆ, ಕೆ.ಎಸ್.ನಾಗರಾಜ್, ವಿವಿಧ ಠಾಣೆಗಳ ಇನ್ಸ್‌ಪೆಕ್ಟರ್ ಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಇತರರು ಭಾಗವಹಿಸಿದ್ದರು.

Exit mobile version