ದೊಡ್ಡಬಳ್ಳಾಪುರ (Doddaballapura): ಬಜೆಟ್‌ನಲ್ಲಿ ಅರ್ಚಕರುಗಳಿಗೆ ಮಾಸಿಕ 1000 ರೂ. ತಸ್ತಿಕ್ ಹೆಚ್ಚಿಸಿರುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮುಜರಾಯಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ವಿದ್ವಾನ್ ಎಸ್. ನವೀನ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಾಜ್ಯ ಮುಜರಾಯಿ ದೇವಾಲಗಳ ಸಿ ದರ್ಜೆ 25551 ಧಾರ್ಮಿಕ ಸಂಸ್ಥೆಗಳಿಗೆ ವಾರ್ಷಿಕ60000 ತಸ್ತಿಕ್ ನೀಡುತ್ತಿದ್ದು 72000 ರೂಗಳನ್ನು ಬಜೆಟ್‌ನಲ್ಲಿ ಹೆಚ್ಚಿಗೆ ಮಾಡಿದ್ದು ಇದರಿಂದ ಅರ್ಚಕರುಗಳಿಗೆ ಮಾಸಿಕ 1000ಹೆಚ್ಚಿಸಿರುವುದಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮುಜರಾಯಿ ದೇವಾಲಯಗಳ ಅರ್ಚಕರ ಮತ್ತು ಆಗಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ವಿದ್ವಾನ್ ಎಸ್. ನವೀನ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಸಂಘದ ವತಿಯಿಂದ ಬೆಂಗಳೂರಿನಲ್ಲಿ ಪುರಭವನದಲ್ಲಿ ನಡೆದ ರಾಜ್ಯ ಮಟ್ಟದ ಮಹಾ ಸಮಾವೇಶದ ಫಲಶ್ರುತಿಯಾಗಿ ಅರ್ಚಕರಗಳಿಗೆ ನೀಡುವ ತಸ್ತಿಕ ಹಣ 1000 ಸಾವಿರ ಹೆಚ್ಚಿಗೆ ಮಾಡಿ, ವರ್ಷಕ್ಕೆ 72 ಸಾವಿರ, ಹಣ ನೀಡಲು ರಾಜ್ಯ ಬಡ್ಜೆಟ್ ಅಧಿವೇಶನ ಸಮಯದಲ್ಲೆ ಘೋಷಣೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಅಖಿಲ ಕರ್ನಾಟಕ ಹಿಂದು ದೇವಾಲಯಗಳ ಅರ್ಚಕರ ಆಗಮಿಕರ ಸಂಘದ ಗೌರವಾಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ.
ರಾಜ್ಯ ಅಖಿಲ ಕರ್ನಾಟಕ ಹಿಂದೂ ದೇವಾಲಯದ ಅರ್ಚಕರು ಆಗಮಿಕ ಉಪಾಧಿ ವಂತರ ಒಕ್ಕೂಟ ಅಧ್ಯಕ್ಷರು ಪ್ರೊ ರಾಧಾಕೃಷ್ಣ, ಪ್ರಧಾನ ಕಾರ್ಯದರ್ಶಿ ಕೆ.ಎಸ್ ಎನ್ ದೀಕ್ಷಿತ್, ಶ್ರೀರಂಗರಾಜನ್, ಹಾಗೂ ರಾಜ್ಯದ ಎಲ್ಲಾ ಸಚಿವರು, ಸದನದಲ್ಲಿ ಅರ್ಚಕರ ಪರವಾಗಿ ಧ್ವನಿ ಎತ್ತಿದ ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆ ಎಂ ಶಿವಲಿಂಗೇಗೌಡ, ಧಾರ್ಮಿಕ ದತ್ತಿ ಆಯುಕ್ತರಿಗೆ ಧನ್ಯವಾದಗಳು ಎಂದಿದ್ದಾರೆ.