ಹೂಸ್ಟನ್: ಮಹಿಳಾ ಪ್ರಯಾಣಿಕರೊಬ್ಬರು ಫೀನಿಕ್ಸ್‌ನಿಂದ ಹೊರಟಿದ್ದ ಸೌತ್‌ವೆಸ್ಟ್ ಏರ್‌ಲೈನ್ಸ್ ವಿಮಾನದಲ್ಲಿ ಸಂಪೂರ್ಣ ವಿವಸ್ತ್ರಗೊಂಡು ಸುಮಾರು 25 ನಿಮಿಷಗಳ ಕಾಲ ವಿಮಾನದಲ್ಲಿ ಓಡಾಡಿರುವ ಘಟನೆ ನಡೆದಿದ್ದು, ವಿಡಿಯೋ (Video) ವೈರಲ್ ಆಗಿದೆ.
ಸೌತ್‌ವೆಸ್ಟ್ ಏರ್‌ಲೈನ್ಸ್ ಫೈಟ್ 733 ರಲ್ಲಿ ಹೂಸ್ತನ್‌ನಿಂದ ಅಮೆರಿಕದ ಫೀನಿಕ್ಸ್‌ಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ.
ಅದಾಗಲೇ ಟೇಕ್ ಆಫ್ ಆಗಿದ್ದ ವಿಮಾನವನ್ನು ಮರಳಿ ಗೇಟ್‌ಗೆ ಹಿಂತಿರುಗುವಂತೆ ಒತ್ತಾಯಿಸಿ ಈ ಮಹಿಳೆ ಈ ರೀತಿ ವರ್ತಿಸಿದ್ದು ಸದ್ಯ ಈಕೆ ಗಗನಯಾತ್ರಿ ಎಂದು ವರದಿಯಾಗಿದೆ.
ಇದ್ದಕ್ಕಿದ್ದಂತೆ ವಿಮಾನದಿಂದ ಇಳಿಯಲು ಬಯಸಿದ ಮಹಿಳೆ ಏಕಾಏಕಿ ಜೋರು ದನಿಯಲ್ಲಿ ಕೂಗಲು ಮತ್ತು ವಿವಸ್ತ್ರಗೊಳ್ಳಲು ಪ್ರಾರಂಭಿಸಿದಳು ಎಂದು ಸಿಬ್ಬಂದಿ ಆಪಾದಿಸಿದ್ದಾರೆ.
ಈ ಮಧ್ಯೆ ಮಹಿಳೆ ಮೇಲಕ್ಕೆ ಕೆಳಗೆ ಜಿಗಿಯಲು ಪ್ರಾರಂಭಿಸಿದ್ದಳು. ಆಕೆ ಮಾನಸಿಕ ಸಮಸ್ಯೆ ಹೊಂದಿದವರಂತೆ ವರ್ತಿಸುತ್ತಿದ್ದಳು ಎಂದು ವಿಮಾನದ ಸಿಬ್ಬಂದಿ ಹೇಳಿದ್ದಾರೆ.
ಪ್ರಯಾಣಿಕರೊಬ್ಬರು ಇಡೀ ಘಟನೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ ಮಹಿಳೆ ಸಂಪೂರ್ಣ ಬೆತ್ತಲೆಯಾಗಿ ವಿಮಾನದಲ್ಲಿ ನಡೆದಾಡುವುದನ್ನು ಕಾಣಬಹುದಾಗಿದೆ.
ಹೂಸ್ಟನ್ ಪೋಲಿಸ್ ಆಕೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ವಶಕ್ಕೆ ತೆಗೆದುಕೊಂಡಿದ್ದು, ಈ ಕುರಿತು ದೂರು ಸಲ್ಲಿಸಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ