Site icon Harithalekhani

ದಿನ ಭವಿಷ್ಯ, ಮಾ.8: ಈ ರಾಶಿಯವರಿಂದು ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಚ್ಚರ

Astrology: It is good to be patient

Astrology: It is good to be patient

Astrology ಶನಿವಾರ, ಮಾರ್ಚ್.8 , 2025, ದೈನಂದಿನ ರಾಶಿ ಭವಿಷ್ಯ

ಮೇಷ ರಾಶಿ: ನಿಮ್ಮ ಪ್ರಾಮಾಣಿಕ ಪ್ರಯತ್ನಗಳೇ ನಿಮ್ಮ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಆದರೆ ಶುದ್ಧ ಬಂಗಾರದಿಂದ ಒಡವೆ ಗಳನ್ನು ಮಾಡಲಾಗುವುದಿಲ್ಲ. ಅದಕ್ಕೆ ಸ್ವಲ್ಪವಾದರು ಬಾಳಿನಲ್ಲಿ ಆನಂದ ಸಂತೋಷ ಹೊಂದುವಿರಿ. ಕೌಟುಂಬಿಕ ಜೀವನದಲ್ಲೂ ಸಂತಸ ಕಂಡುಬರುವುದು. ಮನೆಯ ಹಿರಿ ಯರ ಆರೋಗ್ಯದ ಕಡೆ ಗಮನ ಹರಿಸಿರಿ.
(ಭಕ್ತಿಯಿಂದ ಶ್ರೀ ಧನ್ವಂತರಿ ಮಹಾವಿಷ್ಣು ಪ್ರಾರ್ಥನೆ ಮಾಡಿ ಶುಭವಾಗುವುದು.)

ವೃಷಭ ರಾಶಿ: ಇಂದು ಕೆಲವು ಸವಾಲು ಗಳಿರುತ್ತವೆ.ಆದರೆ ಅನುಭವಿ ವ್ಯಕ್ತಿಯಿಂದ ಸರಿಯಾದ ಸಲಹೆಯೊಂದಿಗೆ,ನೀವು ಖಂಡಿ ತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ಮನೆಯಲ್ಲಿ ಮಂಗಳ ಕಾರ್ಯ ಆಯೋಜನೆಗೆ ಯೋಜನೆ ರೂಪಿಸಲಾಗುವುದು. (ಭಕ್ತಿಯಿಂದ ಶ್ರೀ ಕಾಶೀ ವಿಶ್ವನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮಿಥುನ ರಾಶಿ: ನಿಮ್ಮ ಸ್ನೇಹಿತರು ಸಕಾಲ ದಲ್ಲಿ ಸಹಾಯ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗುವುದು. ಕಚೇರಿಯಲ್ಲಿ ಹೊಸ ತಂತ್ರದ ಪ್ರಯೋಗ ಮಾಡುವಿರಿ ಮತ್ತು ಅದರಲ್ಲಿ ಯಶಸ್ಸನ್ನು ಹೊಂದುವಿರಿ. (ಭಕ್ತಿಯಿಂದ ಸಾಲಿಗ್ರಾಮ ಸ್ವರೂಪ ಶ್ರೀ ಮಹಾವಿಷ್ಣು ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕಟಕ ರಾಶಿ: ನಿಮ್ಮನ್ನು ರಕ್ಷಿಸುವ ಗ್ರಹಗಳು ಉತ್ತಮ ಸ್ಥಿತಿಯಲ್ಲಿ ರುವುದರಿಂದ ಈ ದಿನ ನಿಮ್ಮ ಮನೋಕಾಮನೆಗಳು ಪೂರ್ಣವಾಗುವುದು ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. (ಭಕ್ತಿಯಿಂದ ಶ್ರೀ ಬದರೀನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಸಿಂಹ ರಾಶಿ: ವಿನಾಕಾರಣ ಆಪಾದನೆಗಳನ್ನು ಎದುರಿಸುವ ವಿಚಾರ ಬರಬಹುದು. ಅದಕ್ಕೆ ನೀವು ಕಾರಣರಲ್ಲದಿದ್ದರೂ ಗ್ರಹಗಳು ಅಶುಭ ಸ್ಥಿತಿಯಲ್ಲಿ ಸಂಚರಿಸುವ ಮೂಲಕ ನಿಮ್ಮ ಗೌರವ ಘನತೆಗೆ ಕುಂದುಂಟು ಮಾಡುವವು. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಒಳಿತಾಗುವುದು.)

ಕನ್ಯಾ ರಾಶಿ: ನಿಮ್ಮ ಇಚ್ಛಾಶಕ್ತಿಗೆ ಹೆಚ್ಚಿನ ಬಲವಿದೆ.ಅನೇಕ ಉತ್ತಮ ಕೆಲಸ ಕಾರ್ಯ ಗಳಲ್ಲಿ ಗೆಲುವನ್ನು ಸಾಧಿಸುವಿರಿ.ವಿರೋಧಿ ಗಳು ಸಹಾ ನಿಮ್ಮ ಕರ್ತೃತ್ವ ಶಕ್ತಿಯನ್ನು ಕಂಡು ಬೆರಗಾಗುವರು. ಕೌಟುಂಬಿಕ ಜೀವನ ದಲ್ಲಿ ನೆಮ್ಮದಿಯ ವಾತಾವರಣ ಕಂಡು ಬರುವುದು. (ಭಕ್ತಿಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ತುಲಾ ರಾಶಿ: ಅತ್ಯಮೂಲ್ಯವಾದ ದಾಖಲೆ ಪತ್ರಗಳನ್ನು ಜತನದಿಂದ ಕಾಪಾಡುವುದು ಉತ್ತಮ.ಪ್ರವಾಸ ಸಮಯದಲ್ಲಿ ಅವುಗಳಿಗೆ ಸೂಕ್ತ ಭದ್ರತೆಯನ್ನು ಕಾಯ್ದುಕೊಳ್ಳಿರಿ.ಈ ದಿನ ಮಹತ್ತರ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಚ್ಚರಿಕೆ. (ಭಕ್ತಿಯಿಂದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಶ್ಚಿಕ ರಾಶಿ: ಸಂಕಷ್ಟದ ದಿನಗಳಿಂದ ಹೇಗೆ ಪಾರಾಗಬಹುದೆಂಬುದು ನಿಮ್ಮ ಅನುಭವ ತಿಳಿಸುತ್ತದೆ.ಈ ದಿನದ ಕ್ಲಿಷ್ಟಕರ ಸನ್ನಿವೇಶ ವನ್ನೂ ಸಹ ಭಗವಂತನ ದಯೆಯಿಂದ ಎದುರಿಸಿ ಯಶಸ್ಸನ್ನು ಹೊಂದುವಿರಿ. (ಭಕ್ತಿಯಿಂದ ಶ್ರೀ ಸುದರ್ಶನ ಮಹಾವಿಷ್ಣು ಪ್ರಾರ್ಥನೆ ಮಾಡಿ ಶುಭವಾಗುವುದು.)

ಧನಸ್ಸು ರಾಶಿ: ನಿಮ್ಮ ಕ್ರಿಯಾಶೀಲ ಮತ್ತು ಯೋಜನಾಬದ್ಧ ಪ್ರಾವೀಣ್ಯತೆಯು ಗೌರವ ಆದರಗಳನ್ನು ತಂದು ಕೊಡುವುದು.ಹಿತ ಶತ್ರುಗಳ ಬಗ್ಗೆ ಎಚ್ಚರದಿಂದ ಇರಿ. (ಭಕ್ತಿಯಿಂದ ಶ್ರೀ ಗಾಯತ್ರಿ ದೇವಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಮಕರ ರಾಶಿ: ಮನೆಯ ವಿಚಾರಗಳಲ್ಲಿ ಕಾಳಜಿ ವಹಿಸಲು ಮುಂದಾಗುವಿರಿ.ಇದು ನಿಮ್ಮ ಸಂಗಾತಿಯ ಹರ್ಷಕ್ಕೆ ಕಾರಣವಾಗು ವುದು.ಅನೇಕ ದಿನಗಳಿಂದ ನಿಶ್ಚಯಿಸಿದ್ದ ಕಾರ್ಯಗಳಿಗೆ ಚಾಲನೆ ದೊರೆಯುವುದು. (ಭಕ್ತಿಯಿಂದ ಕುಲದೇವರ ಪ್ರಾರ್ಥನೆ ಮಾಡಿ ಶುಭವಾಗುವುದು.)

ಕುಂಭ ರಾಶಿ: ಈ ದಿನ ಬರುವ ಅಡೆ-ತಡೆ ಗಳನ್ನು ಧೈರ್ಯವಾಗಿ ಎದುರಿಸುವಿರಿ. ಗುರುವು ನಿಮ್ಮ ಬೆಂಗಾವಲಿಗೆ ನಿಲ್ಲುವರು. ಹಲವು ಬದಲಾವಣೆಗಳಿಗೆ ಇಂದು ಸಾಕ್ಷಿ ಯಾಗುವ ಸಂಭವ.ಆರ್ಥಿಕ ಸ್ಥಿತಿ ಉತ್ತಮ ವಾಗಿರುವುದು. (ಭಕ್ತಿಯಿಂದ ಶ್ರೀ ಸಿದ್ಧಿ ವಿನಾಯಕ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮೀನ ರಾಶಿ: ಉತ್ಸಾಹ ಹಾಗೂ ಸಮರ್ಪಕ ನಡೆ ನುಡಿಗ ಳಿಂದಲೇ ಜನರನ್ನು ಆಕರ್ಷಿಸುವಿರಿ. ಪ್ರಶಂಸೆಗಳ ಸುರಿಮಳೆಯಾಗುವುದು. ವ್ಯವಹಾರದ ಸಮಯದಲ್ಲಿ, ಕೆಲವು ರೀತಿಯ ಪರಿಸ್ಥಿತಿ ಉದ್ಭವಿಸುತ್ತದೆ. (ಭಕ್ತಿಯಿಂದ ಶ್ರೀ ಮಾತಾ ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ ಒಳಿತಾಗುವುದು.) 

ರಾಹುಕಾಲ: 09:00 ರಿಂದ 10:30
ಗುಳಿಕಕಾಲ: 06:00 ರಿಂದ 07:30
ಯಮಗಂಡಕಾಲ: 01:30 ರಿಂದ 03:00

Exit mobile version