ದೊಡ್ಡಬಳ್ಳಾಪುರ: ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ (BJP) ಸಂಸದ ತೇಜಸ್ವಿ ಸೂರ್ಯ ಅವರಿಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ತೇಜಸ್ವಿ ಸೂರ್ಯ ಅವರು ಚೆನ್ನೈ ಮೂಲದ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರನ್ನು ಬ್ರಾಹ್ಮಣ ಸಂಪ್ರದಾಯದ ಅಡಿಯಲ್ಲಿ ಶಾಸ್ತ್ರೋಕ್ತವಾಗಿ ವರಿಸಿದ್ದಾರೆ
ಸಂಸದ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದ ಪ್ರಸಾದ್ ಅವರ ವಿವಾಹ ಮಹೋತ್ಸವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಖಾಸಗಿ ರೆಸಾರ್ಟ್ನಲ್ಲಿ ಇಂದು ನೆರವೇರಿದೆ.
ಕೇಂದ್ರ ಸಚಿವರಾದ ಸೋಮಣ್ಣ, ಪ್ರಹ್ಲಾದ್ ಜೋಷಿ, ಅರ್ಜುನ್ ರಾಮ್ ಮೇಘಾ ವಾಲ್, ಸಂಸದ ಡಾ.ಸಿಎನ್ ಮಂಜನಾಥ್, ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ, ಅಣ್ಣಾಮಲೈ, ಆರ್‌ಎಸ್‌ಎಸ್ ಮುಖಂಡ ಸಂತೋಷ್ ಜೀ ಸೇರಿದಂತೆ ಅನೇಕರು ಭಾಗಿಯಾಗಿ, ನೂತನ ದಂಪತಿಗಳಿಗೆ ಶುಭ ಹಾರಿಸಿದರು.

ನೂತನ ದಂಪತಿಯ ಆರತಕ್ಷತೆ ಕಾರ್ಯಕ್ರಮ ಇದೇ ತಿಂಗಳ 8 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಲಿದೆ ಎನ್ನಲಾಗುತ್ತಿದೆ.