Harithalekhani

MSV ಪಬ್ಲಿಕ್ ಶಾಲೆಯಲ್ಲಿ ಟೇಕ್ವಾಂಡೋ ಮತ್ತು ಯೋಗಾಸನ ಸ್ಪರ್ಧೆ..!

ದೊಡ್ಡಬಳ್ಳಾಪುರ; ನಗರದ ಪ್ರತಿಷ್ಠಿತ ಶಾಲೆಯಾದ ಎಂಎಸ್‌ವಿ (MSV) ಪಬ್ಲಿಕ್ ಶಾಲೆಯಲ್ಲಿ ಟೇಕ್ವಾಂಡೋ ಮತ್ತು ಯೋಗಾಸನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಎಂ‌ಎಸ್‌ವಿ ಶಾಲೆಯ ಸಂಸ್ಥಾಪಕ ಎ.ಸುಬ್ರಮಣ್ಯ ಅವರ ಅಧ್ಯಕ್ಷತೆಯಲ್ಲಿ ಈ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿವಿಧ ತರಗತಿಗಳ 150ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಸ್ವಯಂರಕ್ಷಣೆಗಾಗಿ ಟೇಕ್ವಾಂಡೋ ಹಾಗೂ ಆರೋಗ್ಯಕರ ಜೀವನಕ್ಕಾಗಿ ಯೋಗಾಸನ ಎಂಬ ಧ್ಯೇಯದೊಂದಿಗೆ ಸ್ಪರ್ಧೆ ನಡೆಸಲಾಯಿತು.

ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಟೇಕ್ವಾಂಡೋ ತರಬೇತುದಾರ ಪರಮೇಶ್ವರ್ ಜೆ, ಯೋಗ ತರಬೇತುದಾರೆ ರೂಪಾದೇವಿ ಸ್ಪರ್ಧೆಯನ್ನು ನಡೆಸಿಕೊಟ್ಟರು.

ಶಾಲೆಯ ಪ್ರಾಂಶುಪಾಲರಾದ ರೆಮ್ಯ.ಬಿ.ವಿ., ಉಪ ಪ್ರಾಂಶುಪಾಲರಾದ ಪ್ರತಿಮಾ ಪೈ ಮತ್ತಿತರರಿದ್ದರು.

Exit mobile version