Site icon Harithalekhani

ಕುಡುಕ ಪತಿಯ ಕಿರುಕುಳ: 3 ಮಕ್ಕಳೊಂದಿಗೆ ನದಿಗೆ ಹಾರಿದ ತಾಯಿ.!

Mother, son commit suicide

Mother, son commit suicide

ರಾಯಬಾಗ: ಮದ್ಯವ್ಯಸನಿ ಪತಿಯ ಕಿರುಕುಳಕ್ಕೆ ಬೇಸತ್ತು ಮೂವರು ಮಕ್ಕಳೊಂದಿಗೆ ತಾಯಿ ನದಿಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನಲ್ಲಿ ಚಿಂಚಲಿಯಲ್ಲಿ ನಡೆದಿದೆ.

ಮೃತ ದೇಹಗಳನ್ನು ನೀರಿನಿಂದ ಹೊರತೆಯಲಾಗಿದ್ದು, ಶಾರದಾ ಅಶೋಕ ಡಾಲೆ(32 ವರ್ಚ), ಅಮೃತಾ(14 ವರ್ಷ), ಆದರ್ಶ(8 ವರಗಷ) ಹಾಗೂ ಅನುಷಾ (5 ವರ್ಷ) ಎಂದು ಗುರುತಿಸಲಾಗಿದೆ.

ಮೃತ ಶಾರದಾ ಅವರ ಪತಿ ಅಶೋಕ ಡಾಲೆ ನಿತ್ಯವೂ ಕುಡಿದು ಬಂದು ಕಿರುಕುಳ ನೀಡುತ್ತಿದ್ದರಿಂದ ಮನನೊಂದು ಸಮೀಪದ ಕೃಷ್ಣ ನದಿಗೆ ಹಾರಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಗಮನಿಸಿದ ಸ್ಥಳೀಯರು ಒಂದು ಮಗುವನ್ನು ರಕ್ಷಿಸಿ ರಾಯಬಾಗ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮಗು ಮೃತಪಟ್ಟಿದೆ.

ಕುಡಚಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದ್ದು, ಪತಿ ಅಶೋಕ ಡಾಲೆ ಅವರನ್ನು ಬಂಧಿಸಲಾಗಿದೆ‌.

Exit mobile version