ಚಿಕ್ಕಬಳ್ಳಾಪುರ: ಬಾಗೇಪಲ್ಲಿಯಲ್ಲಿ ಅಳಿಯನಿಂದಲೆ ಮಾವನ ಕೊಲೆಯಾಗಿರುವ (Murder) ಘಟನೆ ವರದಿಯಾಗಿದೆ.
ಅಳಿಯ ಬಾಲಕೃಷ್ಣ ಮಾವ ಶ್ರೀನಿವಾಸ್ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಫೆಬ್ರವರಿ 28ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಚಿತ್ರಾವತಿ ಜಲಾಶಯ ರಸ್ತೆಯಲ್ಲಿ ಶ್ರೀನಿವಾಸ್ ಶವ ಪತ್ತೆಯಾಗಿತ್ತು.
ಮಾವ ಸತ್ರೂ ಅಂತ್ಯ ಕ್ರಿಯೆಗೆ ಅಳಿಯ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪೊಲೀಸರು ಅಳಿಯ ಬಾಲಕೃಷ್ಣನ ಬಂಧಿಸಿ ವಿಚಾರಣೆ ವೇಳೆ ಕೊಲೆ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ವರದಿಯಾಗಿದೆ.
ಬಾರ್ ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡ್ತಿದ್ದ ಶ್ರೀನಿವಾಸ್ ಅವರ ಮಗಳನ್ನು ಲವ್ ಮಾಡಿ ಮದುವೆ ಮಾಡಿಕೊಂಡಿದ್ದನಂತೆ ಬಾಲಕೃಷ್ಣ.
ಹತ್ಯೆ ನಡದ ರಾತ್ರಿ ಬಾರ್ ಬಳಿ ಹೋಗಿ ಮಾವನನ್ನ ಕರೆದುಕೊಂಡು ಬಂದಿದ್ದ ಬಾಲಕೃಷ್ಣ. ಬಾಗೇಪಲ್ಲಿಯಿಂದ ಬರುವಾಗ ಮಾರ್ಗ ಮಧ್ಯೆ ಅಳಿಯ ಮಾವನ ಮಧ್ಯೆ ಗಲಾಟೆ ನಡೆದಿದೆ.
ಈ ವೇಳೆ ಕಲ್ಲಿನಿಂದ ತಲೆಗೆ ಹೊಡೆದಿದ್ದಲ್ಲದೆ, ವಾಪಾಸ್ ಬರುವಾಗ ಕಾರು ಹತ್ತಿಸಿ ಹತ್ಯೆ ಮಾಡಿರುವುದಾಗಿ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.