Site icon Harithalekhani

Doddaballapura: ವೃದ್ಧೆಯ ಓಲೆ ಕದ್ದೋಯ್ದ ಕಿರಾತಕರು..!

Slaying the Rowdyseater Barbarians; Arrest of five

Slaying the Rowdyseater Barbarians; Arrest of five

ದೊಡ್ಡಬಳ್ಳಾಪುರ (Doddaballapura): ಬೇಸಿಗೆ ಆರಂಭವಾಗುತ್ತಿದ್ದಂತೆ ತಾಲೂಕಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಲಾರಂಭಿಸಿವೆ.

ಇತ್ತೀಚಿಗಷ್ಟೇ ಅರಳುಮಲ್ಲಿಗೆಯಲ್ಲಿ ಚಿಲ್ಲರೆ ಅಂಗಡಿಯಲ್ಲಿನ ವೃದ್ಧೆಯ ಮಾಂಗಲ್ಯ ಸರ ಕಿತ್ತೊಯ್ದಿದ್ದ ಬೆನ್ನಲ್ಲೇ ಇಂದು ಕಂಟನಕುಂಟೆ ಬಳಿ ದನಗಳ ಮೇಸುತ್ತಿದ್ದ ವೃದ್ಧೆಯ ಗಮನ ಬೇರೆಡೆ ಸೆಳೆದು ಕಿವಿಯ ಓಲೆ ಕದ್ದು ಪರಾರಿಯಾಗಿರುವ ಘಟನೆ ವರದಿಯಾಗಿದೆ.

ಕಂಟನಕುಂಟೆ ನಿವಾಸಿ 74 ವರ್ಷದ ಚಂದ್ರಮ್ಮ ಎನ್ನುವವರು ವಡ್ಡರಹಳ್ಳಿ ನಡುವಿನ ರಸ್ತೆಯಲ್ಲಿ ದನ ಮೇಸುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ಪುರುಷ ಮತ್ತು ಮಹಿಳೆ ವೃದ್ಧೆಯ ಮಾತಿಗೆಳೆದಿದ್ದಾರೆ.

ಈ ವೇಳೆ ಕಳ್ಳರ ಕಾಟ ಜಾಸ್ತಿ ಆಗಿದೆ, ಈ ರೀತಿ ಒಡವೆಗಳನ್ನು ಧರಿಸಬಾರದು ಎಂದು, ವೃದ್ಧೆ ಧರಿಸಿದ್ದ ಸುಮಾರು 15 ಗ್ರಾಂ ತೂಕದ ಓಲೆಯನ್ನ ಬಿಚ್ಚಿಸಿದ್ದು, ಬಳಿಕ ಕವರ್ಗೆ ಹಾಕಿ ನೀಡುವ ವೇಳೆ ಗಮನ ಬೇರೆಡೆ ಸೆಳೆ ಬೇರೆ ಕವರ್ ನೀಡಿ ಪರಾರಿಯಾಗಿದ್ದಾರೆ.

ಬಳಿಕ‌ ಕವರ್ ತಗೆದು ನೋಡಿದಾಗ ವೃದ್ಧೆ ಮೋಸಕ್ಕೆ ಒಳಗಾಗಿರುವುದು ತಿಳಿದು ಬಂದಿದೆ.

ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version