Site icon Harithalekhani

ಧಮ್‌ ಇದ್ದರೆ ಡಿಕೆ ಶಿವಕುಮಾರ್‌ ಅವರನ್ನು ಅಮಾನತು ಮಾಡಲಿ; ಆರ್ ಅಶೋಕ ಸವಾಲು

DK Shivakumar should be suspended if there is any guts; R Ashoka

DK Shivakumar should be suspended if there is any guts; R Ashoka

ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಕುಂಭಮೇಳ ಮತ್ತು ಈಶ ಫೌಂಡೇಶನ್ ಶಿವರಾತ್ರಿ ಆಚರಣೆ ಸೇರಿದಂತೆ ಇತ್ತೀಚಿಗೆ ಅವರ ಹಿಂದುತ್ವ ಬಹಿರಂಗ ಆಚರಣೆ ಕುರಿತು ಬಿಜೆಪಿಗರ ಒಳಗಿದ್ದ ತಳಮಳ ಹೊರಬರಲಾರಂಭಿಸಿದೆ.

ಈ ಕುರಿತು ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಡಿಕೆ ಶಿವಕುಮಾರ್ ಅವರನ್ನು ಅಮಾನತ್ತು ಮಾಡಲಿ ಎಂದು ಹೈಕಮಾಂಡ್ ಗೆ ಸವಾಲು ಎಸೆದಿದ್ದಾರೆ‌

ಡಿಕೆ ಶಿವಕುಮಾರ್‌ ಕುಂಭಮೇಳಕ್ಕೆ ಹೋದಾಗ ಕಾಂಗ್ರೆಸ್‌ ಹೈಕಮಾಂಡ್‌ ಏನೂ ಮಾಡಲಿಲ್ಲ. ಪ್ರಧಾನಿಯನ್ನು ಭೇಟಿ ಮಾಡಿದಾಗಲೂ ಏನೂ ಮಾಡಲಿಲ್ಲ. ಉತ್ತರಪ್ರದೇಶದ ಮುಖ್ಯಮಂತ್ರಿಯನ್ನು ಹಾಡಿ ಹೊಗಳಿದರೂ ಸುಮ್ಮನಿದ್ದರು. ಇತ್ತೀಚೆಗೆ ಈಶ ಫೌಂಡೇಶನ್‌ಗೆ ಹೋಗಿದ್ದಾರೆ.

ಕಾಂಗ್ರೆಸ್‌ ಹೈಕಮಾಂಡ್‌ಗೆ ಧಮ್‌ ಇದ್ದರೆ ಡಿಕೆ ಶಿವಕುಮಾರ್‌ ಅವರನ್ನು ಅಮಾನತು ಮಾಡಲಿ. ನಾವ್ಯಾರೂ ಡಿ.ಕೆ.ಶಿವಕುಮಾರ್‌ ಅವರನ್ನು ಪಕ್ಷಕ್ಕೆ ಆಹ್ವಾನಿಸಿಲ್ಲ ಎಂದು ತಮ್ಮೊಳಗಿದ್ದ ಅಸಹನೆಯನ್ನು ಹೊರಹಾಕಿದ್ದಾರೆ‌.

Exit mobile version