Site icon Harithalekhani

ಡಿಕೆ ಶಿವಕುಮಾರ್ ಹಿಂದೂ ಅಲ್ವಾ.. ಶಿವರಾತ್ರಿಗೆ ಹೋದರೆ ಏನಾಗುತ್ತೆ; ಎಂಬಿ ಪಾಟೀಲ್‌

What happens if DK Shivakumar goes to Shivaratri celebrations; MB Patil

What happens if DK Shivakumar goes to Shivaratri celebrations; MB Patil

ವಿಜಯಪುರ: ಶಿವರಾತ್ರಿ ಅಂಗವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಇಶಾ ಫೌಂಡೇಶನ್ ನಲ್ಲಿ ಆಯೋಜಿಸಿದ್ದ ಜಾಗರಣೆ ಆಚರಣೆಯಲ್ಲಿ ಭಾಗವಹಿಸಿದ್ದರು.

ಆದರೆ ಇದು ಕೆಲ ಕಾಂಗ್ರೆಸ್ ಮುಖಂಡರ ಆಕ್ರೋಶಕ್ಕೆ ಕಾರಣವಾಗಿತ್ತು. ಅದಕ್ಕೂ ಹೆಚ್ಚಾಗಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿರುವುದು ಕೆಲ ಖಾಸಗಿ ಚಾನಲ್ ಗಳಿಗೆ..! ಕಾರ್ಯಕ್ರಮ ಮುಗಿದು ಮೂರು ದಿನ ಕಳೆದರು ಸಿಕ್ಕ ಸಿಕ್ಕವರ ಬಳಿ ಡಿಕೆ ಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದನ್ನೇ ಪ್ರಶ್ನಿಸುತ್ತಿದ್ದಾರೆ.

ಅಂತೆಯೆ ಇಂದು ಸಚಿವ ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ (MB Patil) ಅವರನ್ನು ಪ್ರಶ್ನಿಸಿದ್ದಾರೆ. ಆದರೆ ಅವರಿಗೆ ಬೇಕಾದ ಉತ್ತರ ದೊರಕದೆ ನಿರಾಸೆಗೆ ಒಳಾಗಿದ್ದಾರೆ.

ಏಕೆಂದರೆ ಎಂಬಿ ಪಾಟೀಲ್ ಅವರು ಏಕಾಏಕಿ ಡಿಸಿಎಂ ಡಿಕೆ ಶಿವಕುಮಾರ್ ಹಿಂದೂ ಅಲ್ವಾ. ಅವರು ಶಿವರಾತ್ರಿಗೆ ಹೋದರೆ ಏನಾಗುತ್ತದೆ. ಶಿವರಾತ್ರಿ ಆಚರಿಸುವುದು ಪಕ್ಷದ ವಿರುದ್ಧ ಆಗುತ್ತಾ.. ನೀವ್ ಮಾಧ್ಯಮಗಳು ಸುಮ್ನೆ ಇಲ್ಲಸಲ್ಲದ ವಿಚಾರ ಹಿಡ್ಕೊಂಡ್ ಇದ್ದೀರಿ ಎಂದು ನೇರವಾಗಿಯೆ ಗುಡುಗಿದ್ದಾರೆ.

ಇಶಾ ಕಾರ್ಯಕ್ರಮ ಅದೊಂದು ಧಾರ್ಮಿಕ ಕಾರ್ಯಕ್ರಮ. ಅಮಿತ್ ಶಾ ಅವರನ್ನು ಕರೆದಿದ್ದಾರೆ, ಶಿವಕುಮಾರ್ ಅವರನ್ನು ಕರೆದಿದ್ದಾರೆ.. ಹಾಗಾಗಿ ಭಾಗಿಯಾಗಿದ್ದಾರೆ‌. ನಮ್ಮಲ್ಲೂ ಅನೇಕ ಸ್ವಾಮಿಗಳು ಕಾಂಗ್ರೆಸ್ ಅವರನ್ನು ಕರಿತಾರೆ, ಬಿಜೆಪಿ ಅವರನ್ನು ಕರಿತಾರೆ ತಪ್ಪೇನು..?

ಪ್ರತಿಯೊಬ್ಬರಿಗೂ ವ್ಯಕ್ತಿ ಸ್ವಾತಂತ್ರ್ಯ ಇದೆ. ಅವರವರ ಆಚರಣೆ ಅವರದ್ದು, ಡಿಕೆಶಿ ಶಿವರಾತ್ರಿ ಆಚರಣೆಯಲ್ಲಿ ಭಾಗಿಯಾಗಿರೋದು ಅವರ ವೈಯಕ್ತಿಕ ವಿಚಾರ. ನನ್ನ ವೈಯಕ್ತಿಕ ವಿಚಾರಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಪಕ್ಷದ ವಿಚಾರ ನನ್ನ ವೈಯಕ್ತಿಕ ಅಲ್ಲ. ನನ್ನ ವೈಯಕ್ತಿಕ ಅಸ್ಮಿತೆ, ನನ್ನ ವೈಯಕ್ತಿಕ ಆಚರಣೆ.

ಶಿವರಾತ್ರಿ ಆಚರಣೆಯಲ್ಲಿ ಭಾಗಿಯಾಗುವುದು, ಶಿವರಾತ್ರಿ ಆಚರಣೆ ಮಾಡುವುದು ಪಕ್ಷ ಸಿದ್ದಾಂತ ವಿರೋಧ ಹೇಗ್ ಆಗುತ್ತೆ ಎಂದು ಪ್ರಶ್ನಿಸಿದ್ದಾರೆ.

Exit mobile version