Harithalekhani

MSV ಪಬ್ಲಿಕ್ ಶಾಲೆಯಲ್ಲಿ ಪುಟಾಣಿ ಮಕ್ಕಳ ಘಟಿಕೋತ್ಸವ.. ಪದವಿ ಪ್ರದಾನ ಸಮಾರಂಭ.!

ದೊಡ್ಡಬಳ್ಳಾಪುರ; ಸ್ನಾತಕೋತ್ತರ ಪದವಿ ಸಂದರ್ಭದಲ್ಲಿ ಗ್ರಾಜುಯೇಶನ್ ಡ್ರೆಸ್ ನಲ್ಲಿ ತೆರಳಿ ಪದವಿ ಪ್ರಮಾಣ ಪತ್ರಗಳನ್ನು ಪಡೆಯುವುದು ಸಾಮಾನ್ಯ. ಆದರೆ ಪುಟಾಣಿ ಮಕ್ಕಳ ಗ್ರಾಜುಯೇಶನ್ ಡೇ ಉಡುಗೆಯಲ್ಲಿ ಮಿಂಚುತ್ತಾ, ಪದವಿ ಪ್ರಮಾಣ ಪತ್ರ ಪಡೆದು ಸಂಭ್ರಮಿಸಿದ್ದು, ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಂ.ಎಸ್.ವಿ (MSV) ಪಬ್ಲಿಕ್ ಶಾಲೆಯಲ್ಲಿ ಕಂಡುಬಂತು.

ಪುಟ್ಟ ಮಕ್ಕಳ ಈ ಪದವಿ ಪ್ರದಾನ ಸಮಾರಂಭಕ್ಕೆ ದೊಡ್ಡಬಳ್ಳಾಪುರ ತಾಲ್ಲೂಕು ಆರೋಗ್ಯಾಧಿಕಾರಿ ಶಾರದಾ ನಾಗನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಅವರು, ಮಕ್ಕಳು ವಿದ್ಯಾಭ್ಯಾಸದ ಪ್ರತಿಯೊಂದು ಮಜಲನ್ನು ದಾಟಿ ಗುರಿಯತ್ತ ಸಾಗಲು ಇದು ಪ್ರಥಮ ಮೆಟ್ಟಿಲು. ಮಕ್ಕಳ ಸರ್ವತೋಮುಖ ಏಳಿಗೆಗೆ ಶಾಲೆಯ ಜೊತೆಗೆ ಪಾಲಕರೂ ಸಹ ಕೈಗೂಡಿಸಬೇಕು.

ಉತ್ತಮ ಆರೋಗ್ಯ ಹೊಂದಿದ ಮಕ್ಕಳು ಕಲಿಕೆಯಲ್ಲಿ ಏಕಾಗ್ರತೆ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿದರೆ ಈ ಮಕ್ಕಳು ಉತ್ತಮ ಪ್ರಜೆಗಳಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಸಂಸ್ಥೆಯ ಅಧ್ಯಕ್ಷ ಎ ಸುಬ್ರಮಣ್ಯ ಮಾತನಾಡಿ, ಇದೊಂದು ಉಜ್ವಲ ಭವಿಷ್ಯದ ಹೆಬ್ಬಾಗಿಲು, ಈ ಸಮಾರಂಭವು, ಮಗುವಿನ ಕಲಿಕೆಯನ್ನು ಆಚರಿಸಲು ಮತ್ತು ಮಕ್ಕಳ ಜೀವನದಲ್ಲಿ ಪ್ರಮುಖವಾದ ಹಂತವನ್ನು ಗುರುತಿಸಲು ಒಂದು ಉತ್ತಮವಾದ ಅವಕಾಶವಾಗಿದೆ.

ಮಕ್ಕಳು ಈ ಸೃಷ್ಠಿಯ ಸಭಾಂಗಣದಲ್ಲಿ ಪ್ರತಿನಿತ್ಯ ಅರಳುವ ಪುಷ್ಪಗಳಿದ್ದಂತೆ, ಅಂತಹ ಮುಗ್ಧ ಮನಸ್ಸುಗಳಿಗೆ ಪ್ರತಿನಿತ್ಯ ವಿದ್ಯೆ ಮತ್ತು ಸಂಸ್ಕಾರವನ್ನು ನೀಡುವ ಶಿಕ್ಷಕರು ಪುಣ್ಯವಂತರು ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ರೆಮ್ಯ ಬಿ.ವಿ., ಉಪ ಪ್ರಾಂಶುಪಾಲರಾದ ಪ್ರತಿಮಾ ಪೈ, ಶಿಕ್ಷಕ ವೃಂದ ಭಾಗವಹಿಸಿದ್ದರು.

Exit mobile version