ತುಮಕೂರು Video: ಮನೆಯ ಮುಂದೆ ಮಲಗಿದ್ದ ನಾಯಿಯನ್ನು ಚಿರತೆ (Leopard) ಹೊತ್ತೋಯ್ದಿರುವ ಘಟನೆ ತೊರೆಮಾವಿನಹಳ್ಳಿ ನಡೆದಿದೆ.
ತುರುವೆಕೆರೆ ತಾಲೂಕು ತೊರೆಮಾವಿನಹಳ್ಳಿಯ ಶಂಕರಲಿಂಗಯ್ಯ ಎಂಬುವರ ಮನೆಯಂಗಳಕ್ಕೆ ಬಂದ ಚಿರತೆ ಮಲಗಿದ್ದ ನಾಯಿಯನ್ನು ಹೊತ್ತೋಯ್ದಿದೆ.
ಚಿರತೆ ಬಂದು ಹೋದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೆಳ ದಿನಗಳಿಂದ ತೊರೆಮಾವಿನಹಳ್ಳಿ ಸುತ್ತ ಮುತ್ತ ಕಾಣಿಸಿಕೊಳ್ಳುತ್ತಿದ್ದ ಚಿರತೆ, ತಡರಾತ್ರಿ ಮನೆಯ ಅವರಣಕ್ಕೆ ನುಗ್ಗಿ ಸಾಕು ನಾಯಿಯನ್ನ ಎಳೆದೋಯ್ದ ಚಿರತೆ..
ಸದ್ಯ ಚಿರತೆ ಓಡಾಟ ಕಂಡು ಭಯಭೀತರಾಗಿದ್ದು, ರಾತ್ರಿ ವೇಳೆ ಮನೆಯಿಂದ ಹೊರ ಬರಲು ಗ್ರಾಮಸ್ಥರಿಗೆ ಆತಂಕ ಉಂಟಾಗಿದೆ.
ಇದನ್ನೂ ಓದಿ: ಬೆಡ್‌ಶೀಟ್ ಹೊದ್ದಿಕೊಂಡು ಬಂದು ATM ದೋಚಿದ ಕಳ್ಳರು..!: Video ನೋಡಿ
ಕೂಡಲೇ ಚಿರತೆಯನ್ನು ಸೆರೆಯಿಡಿಯುವಂತೆ ಅರಣ್ಯ ಇಲಾಖೆಗೆಮನವಿ ಗ್ರಾಮಸ್ಥರು ಮನವಿ ಮಾಡಿದ್ದು, ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.