ಬೆಂಗಳೂರು: ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿಯೋರ್ವನ ಹತ್ಯೆ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದ ನಂತರ, ಬಿಡುಗಡೆ ನಂತರ ನಟ ದರ್ಶನ್‌ಗೆ (Darshan) ಕೋರ್ಟ್ ರಿಲೀಫ್ ಕೊಟ್ಟಿದೆ.
ಕೊಲೆ ಕೇಸ್‌ನಲ್ಲಿ ಜಾಮೀನು ನೀಡುವ ವೇಳೆ ಹಲವು ಷರತ್ತು ವಿಧಿಸಿದ್ದ ನ್ಯಾಯಾಲಯ ಇದೀಗ ಷರತ್ತು ಸಡಿಲಗೊಳಿಸಿ ನಟ ದರ್ಶನ್ ಅವರಿಗೆ ರಿಲೀಫ್ ನೀಡಿದೆ.
ದರ್ಶನ್ ಬಿಡುಗಡೆಯ ವೇಳೆ ಬೆಂಗಳೂರು ಗ್ರಾಮಾಂತರ ಬಿಟ್ಟು ತೆರಳದಂತೆ ನಿರ್ಬಂಧ ಹೇರಿ ಜಾಮೀನು ನೀಡಿತ್ತು. ಆದರೆ ನಂತರ ಷರತ್ತು ಸಡಿಲಿಕೆ ಕೋರಿ ದರ್ಶನ್ ಕೋರ್ಟ್‌ಗೆ ಮನವಿ ಮಾಡಿದ್ದರು. ಅದರನ್ವಯ ಇದೀಗ ನಟ ದರ್ಶನ್‌ಗೆ ವಿದೇಶ ಪ್ರಯಾಣಕ್ಕೆ ಮಾತ್ರ ಅನುಮತಿ ಪಡೆಯಬೇಕು ಎಂದು ಕೋರ್ಟ್ ಆದೇಶಿಸಿದೆ.
ಇದರಿಂದಾಗಿ ದೇಶಾದ್ಯಂತ ವಿವಿಧ ಪ್ರದೇಶದಲ್ಲಿ ನಡೆಯುವ ಚಿತ್ರೀಕರಣದಲ್ಲಿ ಭಾಗವಹಿಸಲು ದರ್ಶನ್ಗೆ ಅನುಕೂಲವಾಗಲಿದೆ ಎಂದು ವರದಿಯಾಗಿದೆ.
ಡೆವಿಲ್ ಚಿತ್ರದ ಶೂಟಿಂಗ್‌ಗಾಗಿ ಚಿತ್ರತಂಡ ಎಲ್ಲಾ ತಯಾರಿಯನ್ನೂ ನಡೆಸಿ ಕಾಯುತ್ತಿರುವಾಗಲೇ ನ್ಯಾಯಾಲಯ ರಿಲೀಫ್ ನೀಡಿರುವುದು ನಟ ದರ್ಶನ್ ಹಾಗೂ ಆತನನ್ನು ನಂಬಿ ಚಿತ್ರ ನಿರ್ಮಾಣ ಮಾಡುತ್ತಿರುವ ಸಂಸ್ಥೆಯೂ ನಿಟ್ಟುಸಿರು ಬಿಡುವಂತಾಗಿದೆ