Site icon Harithalekhani

ಕರ್ನಾಟಕ ಬಂದ್‌ಗೆ ಕರೆ..!

call for Karnataka bandh..!

call for Karnataka bandh..!

ಬೆಂಗಳೂರು: ಕಂಡಕ್ಟರ್ ಮೇಲೆ ಹಲ್ಲೆ ಸೇರಿದಂತೆ ಮರಾಠಿ ಪುಂಡರು ಮಿತಿ ಮೀರಿ ವರ್ತನಡಯಿಂದ ಕೆರಳಿರುವ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ (Karnataka bandh) ಕರೆ ನೀಡಿವೆ.

ವಾಟಳ್​ ನಾಗರಾಜ್ ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಮಾರ್ಚ್ 22 ರಂದು ಬೆಳೆಗ್ಗೆ 6 ಗಂಟೆಯಿಂದ ರಿಂದ ಸಂಜೆ 6 ರವರೆಗೆ ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ.

ಈ ಕುರಿತು ಮಾತನಾಡಿರುವ ಹಿರಿಯ ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್ ಅವರು, ಕನ್ನಡಕ್ಕಾಗಿ, ಕನ್ನಡಿಗರಿಗಾಗಿ, ಕನ್ನಡಿಗರ ಮರ್ಯಾದೆಗಾಗಿ ಮಾರ್ಚ್ 22 ಅಖಂಡ ಕರ್ನಾಟಕ ಬಂದ್ ಮಾಡಲಾಗುತ್ತದೆ. ಕರವೇ ಪ್ರವೀಣ್ ಶೆಟ್ಟಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡರಿಗೂ ಮನವಿ ಮಾಡಲಾಗುವುದು. ಮರಾಠಿಗರ ಪುಂಡಾಟಿಕೆ ಜಾಸ್ತಿ ಆಗಿದೆ. ಅದಕ್ಕೆ ಕಡಿವಾಣ ಹಾಕಲೇಬೇಕು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದು ಮಾತನಾಡಿದರೂ ಈ ಬಂದ್ ಅನ್ನು ವಾಪಸ್ ಪಡೆಯಲ್ಲ. ನನ್ನ ಜೀವನದಲ್ಲಿ ಒಮ್ಮೆ ಜಾರಿದ್ದೇನೆ. ಇನ್ನು ಮುಂದೆ ಯಾರೇ ಹೇಳಿದರೂ ಇಟ್ಟ ಹೆಜ್ಜೆ ಹಿಂದೆಕ್ಕೆ ಇಡಲ್ಲ ಎಂದು ಸ್ಪಷ್ಟ ಪಡಿಸಿದರು.

ಮಾರ್ಚ್ 22 ರಂದು ಬೆಳಗ್ಗೆ ಟೌನ್ ಹಾಲ್​ನಿಂದ ಫ್ರೀಡಂ ಪಾರ್ಕ್​ವರೆಗೆ ಮೆರವಣಿಗೆ ನಡೆಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.

Exit mobile version