ಹೈದರಾಬಾದ್: ಕಾರ್ಯಕ್ರಮವೊಂದರಲ್ಲಿ ಆಟವಾಡುತ್ತಿದ್ದ ಮಗುವೊಂದು ಆಕಸ್ಮಿಕವಾಗಿ ಬಿಸಿ ಸಾಂಬರ್ ಪಾತ್ರೆಗೆ ಬಿದ್ದು ಸಾವನ್ನಪ್ಪಿರುವ (Death) ಘಟನೆ ಭೀಮಗಲ್ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನ್ನು ಕರ್ನೆ ನಿಹಾರಿಕಾ ಅವರ ಮಗ ಕರ್ನೆ ಚಾರ್ವಿಕ್ ಮುಚೂರ್ (3 ವರ್ಷ) ಎಂದು ಗುರುತಿಸಲಾಗಿದೆ.
ತಮ್ಮ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆಂದು ಕುಟುಂಬ ಸಮೇತರಾಗಿ ಹೋಗಿದ್ದರು.
ಈ ವೇಳೆ ಇತರ ಮಕ್ಕಳೊಂದಿಗೆ ಆಟವಾಡುವಾಗ ಮಗು ಆಕಸ್ಮಿಕವಾಗಿ ಬಿಸಿ ಸಾಂಬಾರ್ ಗೆ ಬಿದ್ದಿದ್ದಾನೆ. ಮಗು ಬೀಳುತ್ತಿದ್ದಂತೆ ನೆರೆದಿದ್ದ ಜನ ಬಂದು ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಿ ದೇಹದಾದ್ಯಂತ ಸುಟ್ಟಗಾಯಗಳಾಗಿವೆ.
ಕೂಡಲೇ ಹೈದರಾಬಾದ್ ನ ಆಸ್ಪತ್ರೆಗೆಯೊಂದಕ್ಕೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ.
ಸದ್ಯ ಈ ಘಟನೆಗೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.