ದೊಡ್ಡಬಳ್ಳಾಪುರ: ಇಂದು ನಡೆಯಲಿರುವ ಮಹಾಶಿವರಾತ್ರಿ (Mahashivaratri) ಆಚರಣೆಗೆ ತಾಲೂಕಿನಲ್ಲಿ ಸಿದ್ದತೆಗಳು ನಡೆದಿವೆ.
ತಾಲೂಕಿನ ಹಲವಾರು ಶಿವನ ದೇವಾಲಯಗಳು ತನ್ನದೇ ಆದ ಐತಿಹಾಸಿಕ ಹಾಗು ಧಾರ್ಮಿಕ ಮಹತ್ವ ಹೊಂದಿದ್ದು, ಶಿವರಾತ್ರಿ ಹಬ್ಬಕ್ಕೆ ದೇವಾಲಯಗಳಲ್ಲಿ ವಿಶೇಷ ಸಿದ್ದತೆಗಳು ನಡೆದಿವೆ.
ನಗರದ ಬಸವ ಭವನ ಸಮೀಪದ ಸೋಮೇಶ್ವರ (ಸ್ವಯಂಭುಕೇಶ್ವರರ) ದೇವಸ್ಥಾನದಿಂದ ಪ್ರಯಾಣ ಪ್ರಾರಂಭಿಸಿದರೆ ರಾಜಘಟ್ಟ ಈಶ್ವರ ದೇವಸ್ಥಾನ, ಗಂಡರಾಜಪುರದ ಉಮಾಮಹೇಶ್ವರ, ನಂದಿಬೆಟ್ಟದ ತಪ್ಪಲಿನ ಕಣಿವೆ ಬಸವಣ್ಣ, ತೂಬಗೆರೆ ಸಮೀಪದ ಕಾಶಿ ವಿಶ್ವೇಶ್ವರ, ಆರೂಢಿ ಕೋಡಿ ಮಲ್ಲೇಶ್ವರ ಸೇರಿದಂತೆ ತಾಲೂಕಿನ ವಿವಿಧ ಶಿವ ದೇವಾಲಯಗಳನ್ನು ಸ್ಮರಿಸಬಹುದಾಗಿದೆ.
ಶಿವರಾತ್ರಿ ಹಬ್ಬದ ಜಾಗರಣೆ ಅಂಗವಾಗಿ ಭಜನೆ, ಸಂಗೀತ ಕಛೇರಿ, ಪೌರಾಣಿಕ ನಾಟಕ, ಹಾಸ್ಯೋತ್ಸವ ಕಾರ್ಯಕ್ರಮಗಳು ವಿವಿದೆಡೆಗಳಲ್ಲಿ ಆಯೋಜನೆ ಮಾಡಲಾಗಿದೆ.
ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ರಾಂಪುರ ಸಮೀಪದ ತೋಪನಯ್ಯಸ್ವಾಮಿ (ಶಿವ) ದೇವಸ್ಥಾನದ ಬಳಿ ಬಿಲ್ವಪತ್ರೆಯ ವನವಿದೆ. ಶಿವರಾತ್ರಿಯಂದು ಇಲ್ಲಿ ಪ್ರತಿ ವರ್ಷ ವಿಶೇಷ ಪೂಜಾ ಕಾರ್ಯಗಳು ನಡೆಯುತ್ತದೆ.
ಹುಲುಕುಡಿ ಬೆಟ್ಟದ ಮೇಲೆ ಚೋಳರ ಕಾಲದಲ್ಲಿ ಸ್ಥಾಪನೆಯಾಗಿದ್ದು ಎನ್ನಲಾಗುವ ವೀರಭದ್ರಸ್ವಾಮಿ ದೇವಾಲಯವಿದೆ.
ಬೆಟ್ಟದ ತಪ್ಪಲಿನ ಮಾಡೇಶ್ವರ ಗ್ರಾಮದ ಗುಹೆಯಲ್ಲಿ ಮುಕ್ಕಣ್ಣೇಶ್ವರಸ್ವಾಮಿಯ ಶಿವಲಿಂಗ ಮೂರ್ತಿ ಇದೆ. ಕಾರ್ತಿಕ ಮಾಸ ಹಾಗೂ ಶಿವರಾತ್ರಿ ಹಬ್ಬದಂದು ಮಾಕಳಿ ಬೆಟ್ಟಕ್ಕೆ ಹತ್ತಿ ಕಾಡು ಮಲ್ಲೇಶ್ವರಸ್ವಾಮಿ ರ್ಶನ ಪಡೆಯುವುದರೆಂದರೆ ಕೈಲಾಸ ರ್ವತ ಹತ್ತಿದಷ್ಟೇ ಪುಣ್ಯ ಎನ್ನುವುದು ಜನರ ಭಾವನೆ.
ತಾಲೂಕಿನಲ್ಲಿರುವ ಶ್ರವಣೂರು ಗ್ರಾಮದ ನೀಲಕಂಠೇಶ್ವರ ದೇವಾಲಯ ಶತಮಾನದಷ್ಟೇ ಹಿಂದಿನದಾಗಿದೆ. ಹೊಸಹಳ್ಳಿಯ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯ ಇತ್ತೀಚೆಗಷ್ಟೆ ನವೀಕೃತಗೊಂಡು ಶಿವರಾತ್ರಿ ಪೂಜೆಗೆ ಸಜ್ಜಾಗಿದೆ.
ತಾಲೂಕಿನ ಹುಲುಕುಡಿ ಬೆಟ್ಟದ ತಪ್ಪಲಿನ ಗ್ರಾಮಗಳಾದ ಮಾಡೇಶ್ವರ, ಬೈರಾಪುರ, ಮಾಕಳಿ ಬೆಟ್ಟ, ರಾಜಘಟ್ಟ, ತೂಬಗೆರೆ, ಶ್ರವಣೂರು, ಅಂಬಲಗೆರೆ, ಯಲಾದಹಳ್ಳಿ, ರ್ಗಾಜೋಗಹಳ್ಳಿ, ಇಸ್ತೂರು, ಹಣಬೆ ಹಾಗೂ ನಗರದಲ್ಲಿನ ನಗರೇಶ್ವರ, ಬಸವಣ್ಣ, ಬೈರಾಪುರ ಗ್ರಾಮದಲ್ಲಿನ ಶ್ರೀಕಂಠೇಶ್ವರ ದೇವಾಲಯ, ಸೋಮೇಶ್ವರ, ಆರೂಢಿ ಕೋಡಿ ಮಲ್ಲೇಶ್ವರ ದೇವಾಲಯಗಳಲ್ಲಿ ಶಿವಲಿಂಗ ಮೂರ್ತಿಗಳು ಶಿವಭಕ್ತರ ಆರಾಧ್ಯ ದೈವಗಳಾಗಿದ್ದು, ಶಿವರಾತ್ರಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಮಾಡೇಶ್ವರ ಮುಕ್ಕಣ್ಣೇಶ್ವರ ದೇವಾಲಯದಲ್ಲಿ ವಿಶೇಷ :
ತಾಲೂಕಿನ ದೊಡ್ಡಬೆಳವಂಗಲ ಹೋಬಳಿ ಮಾಡೇಶ್ವರ ಗ್ರಾಮದ ಮುಕ್ಕಣ್ಣೇಶ್ವರ ದೇವಾಲಯದಲ್ಲಿ ಶ್ರೀ ಮುಕ್ಕಣ್ಣೇಶ್ವರ ಜರ್ಣೋದ್ಧಾರ ಮತ್ತು ಸೇವಾ ಸಮಿತಿ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ದೇವಾಲಯಕ್ಕೆ 1500 ವರ್ಷಗಳ ಇತಿಹಾಸವಿದೆ. ದೇವಾಲಯದ ಹಿಂದಿನ ಗುಹೆಯಲ್ಲಿ 1156ರಲ್ಲಿ ಕೆತ್ತಿರುವ ಶಿಲಾಶಾಸನವಿದೆ. ದೇವಾಲಯದಲ್ಲಿ ಶಿವರಾತ್ರಿ ಹಾಗೂ ಕಾರ್ತಿಕ ಮಾಸಗಳಲ್ಲಿ ವಿಶೇಷ ಅಲಂಕಾರ ಪೂಜಾ ಕಾರ್ಯಗಳು ನಡೆಯಲಿದ್ದು, ಇಂದು ಬೆಳಿಗ್ಗೆ 8ಗಂಟೆಗೆ ರುದ್ರಾಭಿಷೇಕ, ಮಹಾಮಂಗಳಾರತಿ, ಅನ್ನ ಸಂರ್ಪಣೆ, ರಾತ್ರಿ 8.30ರಿಂದ ಅಖಂಡ ಭಜನಾ ಕಾರ್ಯಕ್ರಮಗಳಿವೆ.