Site icon Harithalekhani

ಮಹಾಶಿವರಾತ್ರಿ: ಕೋಟಿಲಿಂಗೇಶ್ವರದಲ್ಲಿ ಭಕ್ತ ಸಾಗರ..Video ನೋಡಿ

Mahashivaratri: Bhakta Sagara at Kotilingeshwara

Mahashivaratri: Bhakta Sagara at Kotilingeshwara

ಕೋಲಾರ; ಮಹಾಶಿವರಾತ್ರಿ (Mahashivaratri) ಹಿನ್ನಲೆ ಕೋಲಾರದ ಪ್ರಸಿದ್ಧ ಕೋಟಿಲಿಂಗೇಶ್ವರದಲ್ಲಿ (kotilingeshwara) ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಮುಂಜಾನೆಯಿಂದಲೆ ಕೋಟಿಲಿಂಗ ದರ್ಶನಕ್ಕೆ ಬರುತ್ತಿರುವ ಭಕ್ತರು ಪೂಜೆ ಸಲ್ಲಿಸಿ, ಬೃಹತ್ ಆಕಾರದ ಶಿವಲಿಂಗದ ದರ್ಶನ ಪಡೆಯುತ್ತಿದ್ದಾರೆ.

ಕೋಲಾರ ಜಿಲ್ಲೆಯ ಕೆಜಿಎಫ್‌ನ ಕಮ್ಮಸಂದ್ರ ಗ್ರಾಮದಲ್ಲಿ ಇರುವ ಆಧ್ಯಾತ್ಮ ಕೇಂದ್ರ ಕೋಟಿಲಿಂಗೇಶ್ವರವಾಗಿದೆ. ಈ ಕ್ಷೇತ್ರದಲ್ಲಿ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಶಿವನ ಲಿಂಗಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ರಾಜ್ಯದ ವಿವಿದೆಡೆಯಿಂದ ಮತ್ತು ಹೊರರಾಜ್ಯಗಳಿಂದಲೂ ಆಗಮಿಸಿರುವ ಭಕ್ತರು, ಕೋಟಿಲಿಂಗೇಶ್ವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

https://www.harithalekhani.com/wp-content/uploads/2025/02/km_20240803_1080p_30f_20250226_103426.mp4
Exit mobile version