Site icon Harithalekhani

ಮಹಾ ಕುಂಭಮೇಳಕ್ಕಿಂದು ಅದ್ಧೂರಿ ತೆರೆ

Grand end for Maha KumbhaMela

Grand end for Maha KumbhaMela

ಪ್ರಯಾಗ್‌ರಾಜ್‌: 144 ವರ್ಷಗಳ ಬಳಿಕ ಉತ್ತರಪ್ರದೇಶದ ಪ್ರಯಾಗ್‌ರಾಜ್ ನಲ್ಲಿ ಜ.13ರಂದು ಆರಂಭವಾಗಿದ್ದ ಮಹಾ ಕುಂಭಮೇಳಕ್ಕೆ (Maha Kumbhamela) ಶಿವ ರಾತ್ರಿಯ ದಿನವಾದ ಬುಧವಾರ ತೆರೆ ಬೀಳಲಿದೆ.

ಇದುವರೆಗೆ 64 ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದ್ದು, ಕೊನೆಯ ದಿನ 1 ಕೋಟಿಗೂ ಹೆಚ್ಚು ಜನರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವ ನಿರೀಕ್ಷೆಯಿದೆ.

144 ವರ್ಷಕ್ಕೊಮ್ಮೆ ಸಂಭವಿಸುವ ಪುಣ್ಯಕಾಲದ ಹಿನ್ನೆಲೆಯಲ್ಲಿ ದೇಶ ವಿದೇಶಗಳ ಭಕ್ತರು ಆಗಮಿಸಿ 45 ದಿನಗಳ ಅವಧಿಯಲ್ಲಿ ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ.

ಈ ಬಾರಿ 35-40 ಕೋಟಿ ಭಕ್ತರ ಆಗಮನದ ನಿರೀಕ್ಷೆ ಇತ್ತಾದರೂ, ಈ ಹಿಂದಿನ ಎಲ್ಲಾ ದಾಖಲೆ ಮೀರಿ 64 ಕೋಟಿ ಜನರು ಕುಂಭಮೇಳಕ್ಕೆ ಭೇಟಿ ನೀಡಿ ಹೊಸ ದಾಖಲೆ ನಿರ್ಮಿಸಿದ್ದಾರೆ.

Exit mobile version