Astrology: ಬುಧವಾರ, ಫೆ.26,2025, ದೈನಂದಿನ ರಾಶಿ ಭವಿಷ್ಯ
ಮೇಷ ರಾಶಿ: ದುಶ್ಚಟಗಳಿಗೆ ಹಣ ವ್ಯಯ, ಅನ್ಯರಲ್ಲಿ ವೈಮನಸ್ಸು, ಅಧಿಕ ಭಯ,ಅಲ್ಪ ಕಾರ್ಯಸಿದ್ದಿ, ದಂಡ ಕಟ್ಟುವ ಸಾಧ್ಯತೆ. (ಭಕ್ತಿಯಿಂದ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ವೃಷಭ ರಾಶಿ: ಮಕ್ಕಳ ಸಂತೋಷಕ್ಕೆ ಖರ್ಚು, ಋಣಬಾಧೆ, ಹಿರಿಯರ ಭೇಟಿ, ವಿವಾಹ ಯೋಗ,ಮಾತೃವಿನ ಸಹಾಯ. (ಭಕ್ತಿಯಿಂದ ಮನೋ ನಿಯಾಮಕ ಶ್ರೀರುದ್ರ ದೇವರ ಪ್ರಾರ್ಥನೆ ಮಾಡಿ ಶುಭವಾಗುವುದು.)
ಮಿಥುನ ರಾಶಿ: ಹೊಸ ಯೋಜನೆಗಳಿಂದ ಲಾಭ, ಸಂಗಾತಿಯಿಂದ ಹಿತವಚನ, ಅನಗತ್ಯ ಅಲೆದಾಟ, ಅಧಿಕಾರಿಗಳಿಂದ ಪ್ರಶಂಸೆ. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಶುಭವಾಗುವುದು.)
ಕಟಕ ರಾಶಿ: ವಾದ ವಿವಾದಗಳಿಂದ ದೂರವಿರಿ, ಸ್ತ್ರೀ ಲಾಭ, ಕೃಷಿಕರಿಗೆ ಉತ್ತಮ ಲಾಭ, ಮಹಿಳೆಯರಿಗೆ ಶುಭ. (ಭಕ್ತಿಯಿಂದ ಶ್ರೀ ಸೋಮೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಸಿಂಹ ರಾಶಿ: ಕುಟುಂಬದಲ್ಲಿ ಸಂತಸ, ಶತ್ರು ಬಾಧೆ, ಆಲಸ್ಯ ಮನೋಭಾವ, ಪರರ ಧನ ಪ್ರಾಪ್ತಿ, ಹೊಗಳಿಕೆ ಮಾತಿಗೆ ಮರುಳಾಗದಿರಿ. (ಭಕ್ತಿಯಿಂದ ಶ್ರೀ ಕುಲದೇವರ ಪ್ರಾರ್ಥನೆ ಮಾಡಿ ಶುಭವಾಗುವುದು.)
ಕನ್ಯಾ ರಾಶಿ: ಆತ್ಮೀಯರಿಂದ ಸಹಾಯ, ನಾನಾ ವಿಚಾರಗಳಲ್ಲಿ ಆಸಕ್ತಿ, ಪರಿಶ್ರಮಕ್ಕೆ ತಕ್ಕ ಫಲ, ದೈವಿಕ ಚಿಂತನೆ,ಮನಃಶಾಂತಿ. (ಭಕ್ತಿಯಿಂದ ಶ್ರೀ ಕಾಲ ಭೈರವೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ತುಲಾ ರಾಶಿ: ಟ್ರಾವೆಲ್ಸ್‌ನವರಿಗೆ ಲಾಭ, ವಾಹನದಿಂದ ತೊಂದರೆ ಎಚ್ಚರ, ಕುಟುಂಬ ಸೌಖ್ಯ, ಹಿತಶತ್ರುಗಳಿಂದ ತೊಂದರೆ. (ಭಕ್ತಿಯಿಂದ ಶ್ರೀ ಸೋಮೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ವೃಶ್ಚಿಕ ರಾಶಿ: ನೌಕರಿಯಲ್ಲಿ ಕಿರಿಕಿರಿ, ಅನಾವಶ್ಯಕ ಮಾತುಗಳಿಂದ ದೂರವಿರಿ, ಶತ್ರುಗಳ ಮೇಲೆ ಜಯ ಸಾಧಿಸುವಿರಿ. (ಭಕ್ತಿಯಿಂದ ಶ್ರೀ ಮಂಜುನಾಥ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಧನಸ್ಸು ರಾಶಿ: ಹಿರಿಯರ ಗೌರವ, ಉನ್ನತ ಮಟ್ಟಕ್ಕೇರುವಿರಿ, ದೂರ ಪ್ರಯಾಣ. (ಭಕ್ತಿಯಿಂದ ಶ್ರೀ ಅರ್ಧ ನಾರೀಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಮಕರ ರಾಶಿ: ದುಡಿಮೆಯಿಂದ ಬೆಳೆಯುವಿರಿ, ವ್ಯಾಪಾರಿಗಳಿಗೆ ಲಾಭ, ಸ್ವಂತ ಪರಿಶ್ರಮದಿಂದ ಯಶಸ್ಸು. (ಭಕ್ತಿಯಿಂದ ಶ್ರೀ ಉಮಾ ಮಹೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)
ಕುಂಭ ರಾಶಿ: ಚಂಚಲ ಮನಸ್ಸು, ಮಿತ್ರರ ಭೇಟಿ, ಪಾಲುದಾರಿಕೆಯ ಮಾತುಕತೆ, ಅನಾರೋಗ್ಯ,ಕಾರ್ಯ ವಿಕಲ್ಪ. (ಭಕ್ತಿಯಿಂದ ಶ್ರೀ ಕಾಶೀ ವಿಶ್ವನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ಮೀನ ರಾಶಿ: ಉನ್ನತ ಸ್ಥಾನಮಾನ, ಅಧಿಕ ಕೋಪ, ಬೇರೆಯವರನ್ನು ನಿಷ್ಠುರವಾಗಿ ಕಾಣುವಿರಿ, ನಯ ವಂಚಕರ ಮಾತಿಗೆ ಮರುಳಾಗದಿರಿ. (ಭಕ್ತಿಯಿಂದ ಶ್ರೀ ಮೃತ್ಯುಂಜಯ ರುದ್ರ ದೇವರ ಪ್ರಾರ್ಥನೆ ಮಾಡಿ ಒಳಿತಾಗುವುದು.)
ರಾಹುಕಾಲ: 12:00 ರಿಂದ 01:30
ಗುಳಿಕಕಾಲ: 10:30 ರಿಂದ 12:00
ಯಮಗಂಡಕಾಲ: 07:30 ರಿಂದ 09:00
ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು