ದೇವನಹಳ್ಳಿ: ರಾಜ್ಯದ ಸಂಪತ್ತನ್ನ ಭ್ರಷ್ಟ ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಮಾತ್ರ ಉಪಯೋಗಿಸಿ ಕೊಳ್ಳುತ್ತಿದ್ದಾರೆ. ಸ್ಥಳೀಯ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೂ ದಿನಾಂಕ ಘೋಷಣೆ ಆಗುತ್ತೆ ಅದಕ್ಕಿಂತ ಮುಚ್ಚಿತವಾಗಿ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ದೇವನಹಳ್ಳಿಯ ಖಾಸಗಿ ರೆಸಾರ್ಟ್ ನಲ್ಲಿ ಪಕ್ಷದ ಡಿಜಿಟಲ್ ಸದಸ್ಯತ್ವ ನೊಂದಣಿ ಅಭಿಯಾನ ಮತ್ತು ಪಕ್ಷ ಬಲವರ್ಧನೆ ಹಾಗೂ ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಇಂದು ಸಭೆ ನಡೆಸಲಾಯಿತು.
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಸೇರಿದಂತೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪಕ್ಷದ ಮುಖಂಡರುಗಳ ಜತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಸಭೆ ನಡೆಸಿದರು.
ಬೆಳಗಾವಿ ಪ್ರಕರಣ ಕನ್ನಡಿಗರ ತಲೆ ತಗ್ಗಿಸುವಂತೆ ಮಾಡಿದೆ
ಸಭೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿ ನಿಖಿಲ್ ಅವರು ; ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಡೆದ ದೌರ್ಜನ್ಯ ಬಗ್ಗೆ ಪ್ರತಿಕ್ರಿಯೆಸಿದ ಅವರು, ಬೆಳಗಾವಿಯಲ್ಲಿ ನಡೆದ ಪ್ರಕರಣ ಕನ್ನಡಿಗರ ತಲೆ ತಗ್ಗಿಸುವಂತೆ ಮಾಡಿದೆ.
ಕನ್ನಡದಲ್ಲಿ ಮಾತಾಡಿ ಎಂದು ಹೇಳಿದ ಕಂಡಕ್ಟರ್ ಮೇಲೆ ಹಲ್ಲೆ ಮಾಡಿ ಅವ್ಯಾಚ ಪದಗಳಿಂದ ನಿಂದಿಸಿದ್ದಾರೆ. ಇದು ಯಾರಿಗೂ ಒಳ್ಳೇದಲ್ಲ ನಾವು ಭಾರತೀಯರು ಭಾರತೀಯರ ಅಸ್ತಿತ್ವ ಕಾಪಾಡಬೇಕು.
ಈ ಕೂಡಲೇ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಇಬ್ಬರು ಸಾರಿಗೆ ಸಚಿವರು ಜತೆ ಸಭೆ ನಡೆಸಿ ಇತ್ಯಾರ್ಥ ಮಾಡಬೇಕು ಎಂದು ನಿಖಿಲ್ ಅವರು ಒತ್ತಾಹಿಸಿದರು.
ಗೃಹಜ್ಯೋತಿ ಜನರಿಂದ ವಸೂಲಿ?
ಕಾಂಗ್ರೆಸ್ ಸರ್ಕಾರದಲ್ಲಿ ಬೆಲೆ ಏರಿಕೆ ನಿರಂತರವಾಗಿ ನಡೀತಿದೆ. ಪ್ರತಿನಿತ್ಯ ಉಪಯೋಗ ಮಾಡುವ ಸಾಮಗ್ರಿಗಳ ಬೆಲೆ ಏರಿಕೆ ಮಾಡ್ತಿದೆ. ಹಾಲಿನ ದರ ಲೀಟರ್ ಗೆ 5ರೂ ಏರಿಕೆ ಮಾಡ್ಬೇಕು ಎಂದು ಚರ್ಚೆ ನಡೆಯುತ್ತಿದೆ.
ಗ್ಯಾರಂಟಿಗಳಿಂದ ಇದನ್ನು ಸಂಪೂರ್ಣ ಮಾಡಲು ಸರ್ಕಾರ ಬಳಿ ಹಣ ಇಲ್ಲ. ಗ್ಯಾರಂಟಿ ಯೋಜನೆಗೆ ಕನಿಷ್ಠ 50 ಸಾವಿರ ಕೋಟಿ ಬೇಕು. ಅದಿಕ್ಕೆ ಕಾಂಗ್ರೆಸ್ ಕೊಟ್ಟಿರುವ ಮಾತು ನಡೆಸಿಕೊಳ್ಳಲಾಗದೆ ಮತ್ತೆ ನಮ್ಮ ಮೇಲೆ ಹೊರೆ ಹಾಕ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಡಿಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು,ಬೆಂಗಳೂರು ನಗರದಲ್ಲಿ ಹೆಚ್ಚು ತೆರಿಗೆ ವಸೂಲಿ ಮಾಡ್ತಾರೆ, ಬೆಂಗಳೂರು ಪರಿಸ್ಥಿತಿ ಏನಾಗಿದೆ.? ಇವತ್ತು ಐಟಿ ಕಂಪನಿಗಳು ಎಲ್ಲಿಗೆ ಬಂದು ನಿಂತಿವೆ.
ಗೂಗಲ್, ಆಪಲ್ ಮತ್ತು ಮೈಕ್ರೋಸಾಫ್ಟ್ ಕಂಪನಿಗಳು ಹೈದ್ರಾಬಾದ್ ಗೆ ಶಿಫ್ಟ್ ಆಗಿದೆ, ಇದರ ಬಗ್ಗೆ ಕೆ.ಸಿ.ಆರ್ ಅವರು ಹೇಳಿದ್ದಾರೆ ಎಲ್ಲ ರಿತೀಯ ಪೂರಕವಾಗಿ ಕ್ರಮ ಕೈಗೊಂಡಿದೀವಿ ಬನ್ನಿ ಹೈದ್ರಾಬಾದ್ ಗೆ ಅಂತ ದೊಡ್ಡ ಕಂಪನಿಗಳನ್ನ ಕರೆಯುತ್ತಿದ್ದಾರೆ.
ಎಲ್ಲಾ ಕಂಪನಿಗಳು ಕೈಬಿಟ್ಟು ಹೋಗ್ತಿದೆ ಈ ಪರಿಸ್ಥಿತಿಗೆ ಕಾಂಗ್ರೆಸ್ ತಂದಿದೆ ಎಂದರು. ಈ ಕಾಂಗ್ರೆಸ್ ಸರ್ಕಾರ ಎಚ್ಚತ್ತಿಕೊಳ್ಳದಿದ್ರೆ ಏಳುವರೆ ಕೋಟಿ ಕನ್ನಡಿಗರೇ ಬುದ್ದಿ ಕಲಿಸುವ ಕಾಲ ದೂರವಿಲ್ಲ ಎಂದರು.
ಲೋಕಯುಕ್ತ ಪೊಲೀಸರು ಸಿಎಂಗೆ ಆಗ ಬೇಡ, ಈಗ ಬೇಕು
ಹಿಂದೆ ಸಿದ್ರಾಮಣ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಎಸಿಬಿ ಗೆ ಶಕ್ತಿ ತುಂಬಿಸಿದ್ರು, ಹಾವಿಗೆ ಹಲ್ಲು ಕಿತ್ತಾಕಿ ಬಿಟ್ಟಿರೋ ಹಾಗೆ ಲೋಕಾಯುಕ್ತ ಪೊಲೀಸರನ್ನ ಸಿದ್ದರಾಮಯ್ಯ ಅವರ ಗೌರವ ಕೊಡದೆ ಕಿತ್ತು ಹೊಗೆದಿದ್ರು, ಈಗ ಅದೇ ಲೋಕಯುಕ್ತ ಪೊಲೀಸ್ ಮೂಲಕ ರಕ್ಷಣೆ ಪಡೆಯುತ್ತಿದ್ದಾರೆ. ತರಾತುರಿಯಲ್ಲಿ ವರದಿ ಸಲ್ಲಿಸಿದ್ದಾರೆ ಎಂದು ಕಿಡಿಕಾರಿದರು.
ಬಿಬಿಎಂಪಿ ಚುನಾವಣೆ ಮಾಡಲ್ಲ
ಬಿಬಿಎಂಪಿ ಚುನಾವಣೆ ಬಗ್ಗೆ ಮಾತನಾಡಿದ ಅವರು; ಬಿಬಿಎಂಪಿ ಚುನಾವಣೆಯನ್ನ ಮುಂದೆ ಮುಂದೆ ಹಾಕಿಕೊಂಡು ಹೋಗ್ತಿದ್ದಾರೆ. ಚುನಾವಣೆ ಮಾಡ್ತಾರೆ ಅಂತ ನನಗೆ ನಂಬಿಕೆ ಇಲ್ಲ. ಈಗ ಕಾಂಗ್ರೆಸ್ ನಲ್ಲಿ ಒಳ ಜಗಳ ಶುರುವಾಗಿದೆ, ಅವರಲ್ಲಿ ಹೊಂದಾಣಿಕೆ ಇಲ್ಲ, ಅವರಲ್ಲಿ ಒಗ್ಗಟ್ಟು ಬರುವ ತನಕ ಸ್ಥಳೀಯ ಚುನಾವಣೆ ಮಾಡಲ್ಲ.ಕಾದು ನೋಡೋಣ ಏನ್ಮಾಡ್ತರೆ ಅಂತ ಎಂದು ತಿಳಿಸಿದರು.
ಗುತ್ತಿಗೆದಾರರು ಸಾಯೋ ಪರಿಸ್ಥಿತಿಗೆ ಬಂದಿದ್ದಾರೆ
ಈ ಸರ್ಕಾರದಲ್ಲಿ ಗುತ್ತಿಗೆದಾರರ ಹಳೇ ಬಿಲ್ ಇನ್ನು ಕ್ಲಿಯರ್ ಆಗಿಲ್ಲ. ಗುತ್ತಿಗೆದಾರರು ಸಾಲ ಮಾಡಿ ಕೆಲಸ ಮಾಡಿರೋ ಹಣ ಬಿಡುಗಡೆ ಆಗಿಲ್ಲ. ಗುತ್ತಿಗೆದಾರರು ಸಾಯೋ ಪರಿಸ್ಥಿತಿ ಬಂದಿದೆ. ಹಿಂದಿನ ಸರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಗುತ್ತಿಗೆದಾರರು ಬೆಂಬಲ ಕೊಟ್ಟಿದ್ರು, ಆದ್ರೆ ಇವತ್ತು ಆದ್ರೆ ಗುತ್ತಿಗೆದಾರರು ಬೀದಿ ಪಾಲಗಿದ್ದಾರೆ ಈ ಸರ್ಕಾರದ ನಡವಳಿಕೆಯಿಂದ ಎಂದರು.
ಜಿ.ಟಿ ದೇವೇಗೌಡರ ಅಸಮಾಧಾನ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಜಿ.ಟಿ ದೇವೇಗೌಡ ಅವರು ನಮ್ಮ ಪಕ್ಷ ಕೋರ್ ಕಮಿಟಿ ಅಧ್ಯಕ್ಷರು, ಕೋರ್ ಕಮಿಟಿ ಸಭೆ ಮುಂದಿನ ದಿನಗಳಲ್ಲಿ ದೇವೇಗೌಡರು ಮತ್ತು ಕುಮಾರಣ್ಣನ ನೇತೃತ್ವದಲ್ಲಿ ಕರೆಯುತ್ತಾರೆ ಎಂದರು.
ಇನ್ನು ಸಭೆಯಲ್ಲಿ ಮುಖ್ಯವಾಗಿ ಡಿಜಿಟಲ್ ಸದಸ್ಯತ್ವ ನೊಂದಣಿ (ಮಿಸ್ಡ್ ಕಾಲ್) ಅಭಿಯಾನದ ಬಗ್ಗೆ ಗಂಭೀರವಾಗಿ ಚರ್ಚಿಸಲಾಯಿತು ಹಾಗೆಯೇ ಪಕ್ಷವನ್ನ ಬೇರು ಮಟ್ಟದಿಂದ ಬಲಪಡಿಸುವ ನಿಟ್ಟಿನಲ್ಲಿ ಸದಸ್ಯತ್ವ ನೊಂದಣಿ ಅಭಿಯಾನ ಮತ್ತು ಮುಂಬರುವ ಜಿ.ಪಂ ಮತ್ತು ತಾ.ಪಂ ಚುನಾವಣೆ ವಿಚಾರಗಳ ಬಗ್ಗೆ ಈ ಸಭೆಯಲ್ಲಿ ಗಂಭೀರವಾಗಿ ಮುಖಂಡರ ಜತೆ ನಿಖಿಲ್ ಕುಮಾರಸ್ವಾಮಿ ಅವರು
ಸಮಾಲೋಚನೆ ನಡೆಸಿದರು.
ಕೋಲಾರ ಸಂಸದ ಎಂ.ಮಲ್ಲೇಶ್ ಬಾಬು, ಶಿಡ್ಲಘಟ್ಟ ಶಾಸಕ ರವಿಕುಮಾರ್, ಸಮೃದ್ಧಿ ಮಂಜುನಾಥ್, ಜೆಕೆ ವೆಂಕಟಶಿವ ರೆಡ್ಡಿ,ಮಾಜಿ ಉಪ ಸಭಾಪತಿ ಜೆ.ಕೆ ಕೃಷ್ಣ ರೆಡ್ಡಿ, ಮಾಜಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ, ಡಾ ಕೆ ಶ್ರೀನಿವಾಸ್ ಮೂರ್ತಿ.
ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದ್ ರಾಜು, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ. ಮುನೇಗೌಡ, ತುಪಲ್ಲಿ ಚೌಡರೆಡ್ಡಿ, ಸಿಎಂಆರ್ ಶ್ರೀನಾಥ್, ರಾಮೇಗೌಡ ಸೇರಿದಂತೆ ಮೂರು ಜಿಲ್ಲೆಯ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.