ಚಿಕ್ಕಬಳ್ಳಾಪುರ; ತನ್ನ ಪ್ರಿಯಕರ ಮತ್ತೊಬ್ಬ ಹುಡುಗಿ ಜೊತೆ ಸಲುಗೆ ಇಂದ ಇದ್ದಾನೆ, ಮಾತನಾಡ್ತಾನೆ ಅಂತ ಪ್ರಿಯಕರನ ಜೊತೆ ಜಗಳ ಮಾಡಿ, ಮನನೊಂದ ಪ್ರಿಯತಮೆ ಮನೆಯಲ್ಲಿ ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಸಾದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇನ್ನೂ 17 ವರ್ಷದ ರಷ್ಮಿ (ಹೆಸರು ಬದಲಿಸಲಾಗಿದೆ) ಮನೆಯ ಶೌಚಾಲಯದಲ್ಲಿ ನೇಣಿಗೆ ಶರಣಾಗಿ ಸಾವಿನ ಮನೆ ಸೇರಿದ್ದಾಳೆ.
ಅಂದಹಾಗೆ ಪುರ ಗ್ರಾಮದ ಪೋಟೋಗ್ರಾಫರ್ ಆಗಿ ಸ್ಟುಡಿಯೋದಲ್ಲಿ ಕೆಲಸ ಮಾಡ್ತಿದ್ದ ಅದರ್ಶ್ ಹಾಗೂ ರಷ್ಮಿ ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರಂತೆ.
ಇಬ್ಬರ ಪ್ರೀತಿ ವಿಚಾರ ಮನೆಯವರಿಗೂ ಗೊತ್ತಾಗಿ ಎಲ್ಲರೂ ಇಬ್ಬರ ಮದುವೆಗೂ ಒಪ್ಪಿಗೆ ಸಹ ಸೂಚಿಸಿದ್ದರು ಎನ್ನಲಾಗಿದೆ.
ಆದರೆ ಮದುವೆ ವಯಸ್ಸಾಗದ ಕಾರಣ ವಯಸ್ಸಾದ ನಂತರ ಮದುವೆ ಮಾಡಲು ನಿರ್ಧಾರ ಸಹ ಮಾಡಿದ್ದರು. ಹೀಗಾಗಿ ರಷ್ಮಿ ಮನೆಯಲ್ಲಿ ಮದುವೆಯಾಗದೆ ಮನೆ ಅಳಿಯನಂತೆ ಅದರ್ಶ್ ಬಂದು ಹೋಗುತ್ತಿದ್ದನಂತೆ.
ಇನ್ನೂ ರಷ್ಮಿ ತಾಯಿ ಬಳಿ ಕ್ಯಾಮೆರಾಗಾಗಿ, ಬೈಕ್ ಗಾಗಿ, ಕೈ ಸಾಲ ಅಂತ 2 ಲಕ್ಷಕ್ಕೂ ಸಾಲ ಮಾಡಿಸಿದ್ದನಂತೆ.. ಆದರೆ ಇತ್ತೀಚೆಗೆ ಆದರ್ಶ್ ಬೇರೊಬ್ಬ ಹುಡುಗಿ ಜೊತೆ ಮಾತನಾಡೋದು, ವಿಡಿಯೋ ಕಾಲ್ ಮಾಡಿ ಹರಟೆ ಹೊಡೆಯೋದು, ಅದಲ್ಲದೆ ನಿನ್ನೆ ಸಹ ಸೀಮಂತ ಕಾರ್ಯಕ್ರಮವೊಂದರಲ್ಲಿ ಬೇರೊಂದು ಹುಡುಗಿಗೆ ಊಟ ತಿನ್ನಿಸಿದ್ದನಂತೆ.
ಇದನ್ನ ಕಣ್ಣಾರೆ ಕಂಡಿದ್ದ ರಷ್ಮಿ ಜಗಳ ಮಾಡಿಕೊಂಡಿದ್ದಾಳೆ. ಅದೇ ಕೋಪಲ್ಲಿ ಮನೆಗೆ ಬಂದಿದ್ದು ರಾತ್ರಿ ಎದೆನೋವು ಸಹ ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಹೋಗಲು ಪ್ರಿಯಕರನನ್ನ ಕರೆದರೂ ಬಂದಿಲ್ಲವಂತೆ.. ಆಗಲೇ ಅಕ್ಕ ವರ್ಷಾ ಬಳಿ ನಾನು ಬದುಕಲ್ಲ ಸಾಯ್ತೀನಿ ಅಂತ ಹೇಳಿದ್ದಾಳೆ ಎನ್ನಲಾಗಿದೆ.
ಆಸ್ಪತ್ರೆಗೆ ಹೋಗಿ ಬಂದು ಮಗಳು ಏನೋ ಮಾಡ್ಕೋತಾಳೆ ಅಂತ ಇಡೀ ರಾತ್ರಿ ಕಾವಲು ಕಾದಿದ್ದಾರೆ. ಆದರೆ ಬೆಳಿಗ್ಗೆ ಎಂದಿನಂತೆ ಶೌಚಾಲಯಕ್ಕೆ ಹೋಗುವ ರೀತಿಯಲ್ಲಿ ಎದ್ದು ಹೋಗಿ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.