ದೊಡ್ಡಬಳ್ಳಾಪುರ (Doddaballapura): ಶ್ರೀ ಅಂಭಾಭವಾನಿ ಮರಾಠ ಸಂಘದವತಿಯಿಂದ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತೋತ್ಸವವನ್ನು ಅದ್ಧೂರಿ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಶ್ರೀ ಅಂಭಾಭವಾನಿ ದೇವಿಗೆ ಆರತಿಗಳು ಹಾಗೂ ಸ್ವರ್ಣ ರಥದಲ್ಲಿ ಶಿವಾಜಿ ಮಹಾರಾಜರ ಭಾವ ಚಿತ್ರವನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.