ದೊಡ್ಡಬಳ್ಳಾಪುರ (Doddaballapura); ರಸ್ತೆ ಗೊಂದಲದ ಕಾರಣ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ ಮೊಗಚಿ ಬಿದ್ದು ಮಗು ಸೇರಿ ಸುಮಾರು 10 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಮೇಷ್ಟ್ರು ಮನೆ ಕ್ರಾಸ್ ಸಂಭವಿಸಿದೆ.
ಶಿರಾದ ಗಿಡ್ಡನಹಳ್ಳಿಯಿಂದ ಯಲಹಂಕ ನಡೆಯುವ ನಾಮಕರಣ ಕಾರ್ಯಕ್ರಮಕ್ಕೆ ತೆರಳುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ.
ಯಲಹಂಕ್ಕೆ ತೆರಳುವ ಸಂದರ್ಭದಲ್ಲಿ ರಸ್ತೆ ಗೊಂದಲದಿಂದ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆಯಲ್ಲಿ ಒಂದು ವರ್ಷದ ಮಗು ಸೇರಿ 10 ಮಂದಿಗೆ ತೀವ್ರ ಗಾಯಗಳಾಗಿವೆ.
ಅದರಲ್ಲಿ ಮಗುವಿನ ಹಣೆಗೆ ಪೆಟ್ಟು ಹೆಚ್ಚಾಗಿದ್ದು, ಸ್ಥಳಕ್ಕೆ ದೌಡಾಯಿಸಿದ ದೊಡ್ಡಬಳ್ಳಾಪುರದ ನಿವಾಸಿಗಳಾದ ಕೀರ್ತಿ ಮಹೇಶ್ ಹಾಗೂ ಶಿವಕುಮಾರ್ ಎನ್ನುವವರು ಅಂಬುಲೆನ್ಸ್ ವಿಳಂಭವಾದ ಕಾರಣ ಸ್ವಂತ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಸ್ಸಿನಲ್ಲಿದ್ದ ಮಹಿಳೆಯರು ಮತ್ತು ಮಕ್ಕಳನ್ನು ಹೊರತೆಯಲಾಗಿದ್ದು, 10 ಮಂದಿಯನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕ್ರೇನ್ ಬಳಸಿ ಬಸ್ಸನ್ನು ಮೇಲತ್ತಲಾಗಿದೆ.