Astrology: ಭಾನುವಾರ, ಫೆಬ್ರವರಿ 23, 2025, ದೈನಂದಿನ ರಾಶಿ ಭವಿಷ್ಯ
ಮೇಷ ರಾಶಿ: ಆರೋಗ್ಯಕರ ಆಹಾರ ಸೇವನೆ ಮತ್ತು ತೂಕ ನಿಯಂತ್ರಣ ಇಂದು ನಿಮಗೆ ಮುಖ್ಯ. ಇತರೆ ಜನರೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳಿ. ಅಹಿತಕರಗಳಿಂದ ದೂರವಿರಿ.
ವೃಷಭ ರಾಶಿ: ಕಳೆದುಹೋದ ಸಂಬಂಧಗಳಿಗೆ ಹೆಚ್ಚಿನ ಗಮನ ನೀಡದಿರಿ. ಚಿಂತಿಸಲು ಸಾಕಷ್ಟು ವಿಚಾರಗಳಿವೆ. ಗಾಳಿಯಲ್ಲಿ ಕೇಳಿ ಬರುವ ಸುದ್ದಿಗಳಿಂದ ದೂರವಿರಿ. ಕೆಲಸ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಿ.
ಮಿಥುನ ರಾಶಿ: ಮಂಗಳನ ಪ್ರಭಾವ, ನಿಮ್ಮ ರಾಶಿ ಮೇಲಿದ್ದು,ಪ್ರೀತಿ ಪಾತ್ರರ ಭಾವನೆಗಳಿಗೆ ಸ್ಪಂದನೆ ನೀಡಿ. ವ್ಯಾಪಾರ ಹಾಗೂ ವಹಿವಾಟುಗಳಲ್ಲಿ ಎರಡು ಬಾರಿ ಯೋಚಿಸಿ ನಿರ್ಧಾರ ಕೈಗೊಳ್ಳಿ.
ಕಟಕ ರಾಶಿ: ಮಹತ್ವಾಕಾಂಕ್ಷೆಯ ಮನಸ್ಥಿತಿಯಲ್ಲಿದ್ದೀರಿ,
ಆದರೆ ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ನಿಮ್ಮ ಹಣವನ್ನು ಉತ್ತಮವಾಗಿ ನಿಭಾಯಿಸುವುದು. ಇತರರಿಗೆ ಸಹಾಯ ಮಾಡುವುದರಲ್ಲಿ ತಪ್ಪಿಲ್ಲ. ಆದರೆ, ಅದು ಅತಿಯಾಗದಿರಲಿ.
ಸಿಂಹ ರಾಶಿ: ಇತರರಿಗೆ ಹೆಚ್ಚು ಬುದ್ಧಿ ಹೇಳುವ ಕೆಲಸ ಮಾಡದಿರಿ. ಯಾವುದೇ ವಿಚಾರಗಳಿಗೂ ತೀರ್ಪು ನೀಡದಿರಿ. ನಿಂದನೆಗಳು ಕೇಳಿಬರಬಹುದು ಜಾಗರೂಕರಾಗಿರಿ.
ಕನ್ಯಾ ರಾಶಿ: ಅರ್ಥೈಸಿಕೊಂಡಂತೆ ಎಲ್ಲವೂ ಇರುವುದಿಲ್ಲ. ಯೋಜನೆಗಳನ್ನು ರೂಪಿಸಲು ಮತ್ತು ಅಡಿಪಾಯ ಹಾಕಲು, ಭವಿಷ್ಯದ ಯಶಸ್ಸಿಗೆ ಸಿದ್ಧರಾಗಲು ಇದು ಸೂಕ್ತ ಕ್ಷಣವಾಗಿದೆ.
ತುಲಾ ರಾಶಿ: ಪಾಲುದಾರಿಕೆ ಅಥವಾ ತಂಡದ ಕೆಲಸದಲ್ಲಿ ಕೌಶಲ್ಯ ಪ್ರದರ್ಶಿಸಲಿದ್ದೀರಿ. ಇದು ಉತ್ತಮ ಅವಕಾಶಗಳಿಗೆ ದಾರಿ ಮಾಡಿಕೊಡಲಿದೆ, ಸಾಮಾಜಿಕ ಗೌರವ ಪ್ರತಿಷ್ಠೆ ವೃದ್ಧಿಸಲಿದೆ.
ವೃಶ್ಚಿಕ ರಾಶಿ: ಕೆಲಸದಲ್ಲಿ ಸಂಪೂರ್ಣ ಶ್ರಮ ಹಾಕಿ ಕೆಲಸ ಮಾಡಿ. ಭಯಬೇಡ ಮುನ್ನಡೆಯಿರಿ. ಅಪಾಯಗಳು ತಾನಾಗೇ ಬದಿಗೆ ಸರಿಯಲಿವೆ.
ಧನಸ್ಸು ರಾಶಿ: ಎಲ್ಲಾ ವಿಚಾರದಲ್ಲಿ ಮೌನ ಒಳ್ಳೆಯದಲ್ಲ. ಅನ್ಯಾಯದ ವಿರುದ್ಧ ಧ್ವನಿ ಎತ್ತಿ. ವೃತ್ತಿಪರ ಬೆಳವಣಿಗೆಗಳು ಅನುಕೂಲಕರವಾಗಿವೆ ಮತ್ತು ವಿವಿಧ ಅವಕಾಶಗಳು ನಿಮ್ಮ ಬಳಿ ಬರುತ್ತವೆ. ಪ್ರಯಾಣದ ಸಾಧ್ಯತೆಗಳಿವೆ. ಅಪರಿಚಿತ ವ್ಯಕ್ತಿಗಳು ಸಿಗಬಹುದು ಜಾಗರೂಕರಾಗಿರಿ.
ಮಕರ ರಾಶಿ: ಕೆಲ ಸಂಪರ್ಕ ಗಳು, ಪಾಲುದಾರಿಕೆಗಳು ದೀರ್ಘಕಾಲೀನ ಭದ್ರತೆ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡಲಿದೆ. ಅನಗತ್ಯವಾದ ಸ್ಪರ್ಧೆಗಳು ಬೇಡ. ಆರ್ಥಿಕವಾಗಿ ಸ್ಥಿರವಾಗಿರಲು ಸಾಧ್ಯವಿದೆ. ಏಕೆಂದರೆ ಗಳಿಕೆಯು ಸ್ಥಿರವಾಗಿರುತ್ತದೆ. ಕೆಲಸದಲ್ಲಿ ಉತ್ತಮ ಲಾಭಗಳಿಸುವ ಸೂಚನೆ ಇದೆ. ಶ್ರಮದಿಂದ ಲಾಭ ಪಡೆಯಬಹುದು. ಆರೋಗ್ಯ ದೃಷ್ಟಿಯಿಂದ ಜಾಗರೂಕರಾಗಿರಿ.
ಕುಂಭ ರಾಶಿ: ನಕಾರಾತ್ಮಕ ಆಲೋಚನೆಗಳು ಮಾನಸಿಕ ಒತ್ತಡಕ್ಕೆ ಕಾರಣ ಆಗಬಹುದು. ಧ್ಯಾನ, ಯೋಗ, ಅಥವಾ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗುವುದರಿಂದ ಮನಸ್ಸಿಗೆ ಶಾಂತಿ ಸಿಗಬಹುದು. ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಿರಿ.
ಮೀನ ರಾಶಿ: ಇನ್ನೂ ಕಷ್ಟಪಟ್ಟು ಕೆಲಸ ಮಾಡುತ್ತಿರುವಂತೆ ತೋರುತ್ತಿದೆ, ಈ ಪರಿಶ್ರಮವೇ ಎಲ್ಲಾ ಪಾಲುದಾರಿಕೆಗಳಿಗೆ ಉತ್ತೇಜನವನ್ನು ನೀಡಲಿದೆ. ಹೊಸ ಸ್ನೇಹ ಸಂಪರ್ಕಗಳು ದೊರೆಯುವ ಯೋಗವಿದೆ.
ರಾಹುಕಾಲ: 05:03 ರಿಂದ 06:32
ಗುಳಿಕಕಾಲ: 03:34 ರಿಂದ 05:03
ಯಮಗಂಡಕಾಲ: 12:36 ರಿಂದ 02:05