ದೊಡ್ಡಬಳ್ಳಾಪುರ ( Doddaballapura): ನಗರದ ಡಿ.ಕ್ರಾಸ್ ರಸ್ತೆಯ ಎಲ್ಐಸಿ ಕಚೇರಿ ಸಮೀಪದ ಸೋಪಾ ಸೇಟ್ ಅಂಗಡಿ ಹಾಗೂ ಗ್ರ್ಯಾನೈಟ್ ಅಂಗಡಿಗಳ ಮೇಲ್ಛಾವಣಿಯ ತಗಡಿನ ಶೀಟ್ಗಳನ್ನು ಕತ್ತರಿಸಿ ಒಳ ನುಗ್ಗಿರುವ ಕಳ್ಳರು ಬರಿಗೈಯಲ್ಲಿ ಹೋಗಿರುವ ಪ್ರಕರಣ ಬುಧವಾರ ರಾತ್ರಿ ನಡೆದಿದೆ.
ಅಂಗಡಿಯ ಮೇಲ್ಛಾವಣಿ ತಗಡಿನ ಶೀಟ್ಗಳನ್ನು ಕತ್ತರಿಸಿ ಒಳಗೆ ಇಳಿದಿರುವುದು ನಗರದ ಇತರೆ ಅಂಗಡಿ ಮಾಲೀಕರ ನಿದ್ದೆಗಡೆಸಿದೆ.
ಸೋಪಾ ಹಾಗೂ ಗ್ರ್ಯಾನೈಟ್ ಅಂಗಡಿಗಳ ಗಲ್ಲಾ ಪೆಟ್ಟಿಗೆಯಲ್ಲಿ ಒಂದೆರಡು ಸಾವಿರ ಚಿಲ್ಲರೆ ಹಣ ಬಿಟ್ಟರೆ ಇತರೆ ಬೆಲೆ ಬಾಳುವ ವಸ್ತುಗಳು ಇರಲಿಲ್ಲ.
ಸೋಪಾ ಸೆಟ್ಗಳನ್ನು ಮೇಲ್ಛಾವಣಿ ಮೂಲಕ ಸಾಗಿಸಲು ಸಾಧ್ಯವಾಗದೆ ಚಿಲ್ಲರೆ ಕಾಸಿಗಷ್ಟೆ ತೃಪ್ತಿಪಟ್ಟು ಹೋಗಿದ್ದಾರೆ.
ಅಂಗಡಿಯಲ್ಲಿನ ಇತರೆ ವಸ್ತುಗಳಿಗೆ ಯಾವುದೇ ರೀತಿಯ ಹಾನಿಯನ್ನು ಮಾಡಿಲ್ಲ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.