ದೊಡ್ಡಬಳ್ಳಾಪುರ (Doddaballapura): ಇತ್ತೀಚೆಗೆ ನಡೆದ ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ತಾಲೂಕಿನ ಹಿರಿಯ ಮುಖಂಡ ದಿವಂಗತ ಸಿ.ಡಿ.ಸತ್ಯನಾರಾಯಣ ಗೌಡರ ಪುತ್ರ ಸಿ. ಎಸ್.ಗಿರೀಶ್ ಕುಮಾರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಎಂಎಲ್‌ಸಿ ರಮೇಶ್ ಬಾಬು, ವಕೀಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಪ್ರವೀಣ್ ಗೌಡ, ಉಪನಗರ ವರ್ತುಲ ರಸ್ತೆ ಯೋಜನ ಪ್ರಾಧಿಕಾರ ಸದಸ್ಯ ದೀಪು ಸಿ.ಆರ್., ವಕೀಲರುಗಳಾದ ಬ್ಯಾಟಗಯ್ಯ, ಶ್ರೀನಿವಾಸ್, ರಘು, ಮತ್ತಿತರರಿದ್ದರು.