ದೊಡ್ಡಬಳ್ಳಾಪುರ (Doddaballapura): ವಾಹನ ಒಂದನ್ನು ಓವರ್ ಟೇಕ್ ಮಾಡಲು ಮುಂದಾದ ಕಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನಪ್ಪಿರುವ ಘಟನೆ ತಾಲೂಕಿನ ಮಾಕಳಿ ದುರ್ಗ ಬಳಿ ಸಂಭವಿಸಿದೆ.
ಮೃತ ದುರ್ದೈವಿಗಳನ್ನು ಬೆಂಗಳೂರಿನ ನಂದಿನಿಲೇಔಟ್ ನಿವಾಸಿಗಳಾದ ಸುಮಾರು 28ರಿಂದ 30 ವರ್ಷ ಪ್ರಾಯದ ಚೇತನ್, ವಸಂತ್ ಎಂದು ಗುರುತಿಸಲಾಗಿದೆ.
ಗೌರಿಬಿದನೂರು ಬಳಿ ಬರ್ತ್‌ಡೇ ಪಾರ್ಟಿ ಮುಗಿಸಿ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ, ಮಾಕಳಿ ದುರ್ಗದ ಬಳಿ ವಾಹನವೊಂದನ್ನು ಹಿಂದಿಕ್ಕುವ ಆತುರದಲ್ಲಿ ಎದುರೆಗಡೆ ಬರ್ತಿದ್ದ ಪೆಟ್ರೋಲ್ ಟ್ಯಾಂಕರ್ ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಕಾರಿನ ಚಾಲಕ ಹಾಗೂ ಆತನ ಹಿಂಭಾಗದಲ್ಲಿದ್ದ ಇಬ್ಬರು ಸಾವನಪ್ಪಿದ್ದು, ಎಡಭಾಗದಲ್ಲಿ ಕುಳಿತವರಿಗೆ ತೀವ್ರ ಪೆಟ್ಟಾದ ಪರಿಣಾಮ, ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮೃತ ದೇಹಗಳನ್ನು ಹರಸಾಹಸ ಪಟ್ಟು ಕಾರಿನಿಂದ ಮೃತದೇಹ ಹೊರತೆಗೆಯಲಾಗದೆ ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ಹೆಚ್ಚಿನ ಮಾಹಿತಿ ಅಪ್ಡೇಟ್ ಆಗುತ್ತಿದೆ)