Site icon Harithalekhani

ಭೀಕರ ಅಪಘಾತ.. ಅದೃಷ್ಟವಶಾತ್ ಕಾರಲ್ಲಿದ್ದವರು ಪಾರು..!| ವೈರಲ್ Video ನೋಡಿ

Terrible accident… luckily the occupants of the car escaped

Terrible accident… luckily the occupants of the car escaped

ಚನ್ನಪಟ್ಟಣ: ಮಾಜಿ ಸಂಸದ ಪ್ರತಾಪ್ ಸಿಂಹ (Pratap simha) ಅವರು ಮೈಸೂರು-ಕೊಡಗು ಸಂಸದರಾಗಿದ್ದ ವೇಳೆ ಹಲವು ವಿರೋಧಗಳ ನಡುವೆಯೂ, ಕಾಳಜಿವಹಿಸಿ ಮಾಡಿದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ವಿಪರ್ಯಾಸವೆಂದರೆ ಈ ಎಕ್ಸ್‌ಪ್ರೆಸ್‌ವೇನಲ್ಲಿ ವಾಹನ ಚಾಲಕರ ಬೇಜವಬ್ದಾರಿಯ ಮಿತಿಮೀರಿದ ವೇಗದಿಂದಾಗಿ ಪದೇ ಪದೇ ಭೀಕರ ಅಪಘಾತಗಳ (Accident) ಮೂಲಕ ಸುದ್ದಿಯಾಗುತ್ತಿದೆ.

ಅಂತೆಯೇ ಇಂದು ಬೆಳಗ್ಗೆ ಬ್ಯಾರಿಕೇಡ್ ಹಾಕಿ ರಸ್ತೆ ಸ್ವಚ್ಛಗೊಳಿಸುವ ವೇಳೆ ಭೀಕರ ಅಪಘಾತವೊಂದು ಸಂಭವಿಸಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರು, ಅಪಘಾತದಲ್ಲಿ ಇಬ್ಬರು ಗಾಯಗೊಂಡಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕಣ್ಣ ರಸ್ತೆ ಬಳಿ ಸಂಭವಿಸಿದೆ.

ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಬ್ಯಾರಿಕೇಡ್ ಗಮನಿಸದೇ ಏಕಾಏಕಿ ಆಗಿ ಬ್ರೇಕ್ ಹಾಕಿದ್ರಿಂದ ಹಿಂಬದಿಯಿಂದ ಬಂದ ಮತ್ತೊಂದು ಕಾರು ಮುಂದೆ ನಿಂತಿದ್ದ ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಮುಂಬದಿ ಕಾರಿನ ಕೆಳಗೆ ನುಗ್ಗಿದೆ.

ಅಪಘಾತದಲ್ಲಿ ಯಾರಿಗೂ ಕೂಡ ಯಾವುದೇ ಅಪಾಯ ಉಂಟಾಗಿಲ್ಲ, ಈ ಕುರಿತು ಚನ್ನಪಟ್ಟಣ ಸಂಚಾರ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದಾರೆ.

https://www.harithalekhani.com/wp-content/uploads/2025/02/1001024248.mp4

ಈ ವಿಡಿಯೋವನ್ನು ಗೋ ರಾ ಶ್ರೀನಿವಾಸ್ ಗೌಡ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ.

Exit mobile version