ಮೇಹೂರ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ (Maha Kumbhamela) ಹೋಗಿದ್ದ ರಾಯಚೂರಿನ ಭಕ್ತರೊಬ್ಬರು ರಸ್ತೆ ಅಪಘಾತದಲ್ಲಿ (Accident) ಮೃತಪಟ್ಟಿದ್ದಾರೆ.
ಮಹಾದೇವ ವಾಲೇಕರ್ (48 ವರ್ಷ) ಮೃತ ದುರ್ದೈವಿ.
ಮಧ್ಯಪ್ರದೇಶದ ಮೇಹೂರ್ ಬಳಿ ಅವರಿಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಸಾವನ್ನಪ್ಪಿದ್ದಾರೆ.
ರಾಯಚೂರು ತಾಲೂ ಕಿನ ಚಂದ್ರಬಂಡಾ ಗ್ರಾಮದ ಮಹಾ ದೇವ ಕುಟುಂಬ ಸ್ನೇಹಿತರೊಂದಿಗೆ ಪ್ರಯಾಗ್‌ರಾಜ್ ಕುಂಭಮೇಳದಿಂದ ವಾಪಸ್ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಮಹಾದೇವ ವಾಲೇಕರ್ ಪ್ರಯಾಣಿಸುತ್ತಿದ್ದ ಕಾರು ರಸ್ತೆಬದಿ ನಿಂತಿತ್ತು. ಕಾರಿನಲ್ಲಿದ್ದವರು ಕೆಳಗಡೆ ಇಳಿದಿದ್ದರು. ಈ ವೇಳೆ, ರಸ್ತೆಬದಿ ನಿಂತಿದ್ದ ಮಹಾದೇವ ಮೇಲೆ ಹೈದರಾಬಾದ್ ಮೂಲದ ಕಾರು ಹರಿದಿದೆ. ತಕ್ಷಣವೇ ಮಹಾದೇವ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಬೊಲೆರೊ ವಾಹನ – ಬಸ್ ನಡುವೆ ಅಪಘಾತ
ಕುಂಭಮೇಳಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ಬೊಲೆರೊ ವಾಹನ ಮತ್ತು ಬಸ್ ನಡುವೆ ಮಿರ್ಜಾಪುರ-ಪ್ರಯಾಗರಾಜ್ ಹೆದ್ದಾರಿಯಲ್ಲಿ ಮುಖಾಮುಖಿ ಡಿಕ್ಕಿಯಾಗಿದ್ದು, ಬೊಲೆರೊದಲ್ಲಿದ್ದ 10 ಭಕ್ತರು ಸಾವಿಗೀಡಾಗಿದ್ದಾರೆ.
ಬಸ್‌ನಲ್ಲಿದ್ದ 19 ಪ್ರಯಾಣಿಕರು ಗಾಯಗೊಂಡಿ ದ್ದಾರೆ.
ಮೃತರೆಲ್ಲರು ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯವರು.