ದೊಡ್ಡಬಳ್ಳಾಪುರ (Doddaballapura): ಗೂಡ್ಸ್ ರೈಲು ದಾಟಲು ಮುಂದಾದ ವೇಳೆ ರೈಲಿನ ಚಕ್ರಕ್ಕೆ ಕಾಲು ಸಿಲುಕಿ, ಯುವಕನ ಪಾದ ತುಂಡಾಗಿರುವ ಘಟನೆ ರೈಲ್ವೆ ಸ್ಟೇಷನ್‌ನಲ್ಲಿ ಶನಿವಾರ ರಾತ್ರಿ ನಡೆದಿದೆ.
ದೊಡ್ಡಬಳ್ಳಾಪುರದ ದರ್ಗಾಜೋಗಿಹಳ್ಳಿ ನಿವಾಸಿ ಹೇಮಂತ್ ಕುಮಾರ್ ಕಾಲು ಕಳೆದುಕೊಂಡ ದುರ್ದೈವಿ ಯುವಕ.
ಶನಿವಾರ ರಾತ್ರಿ 2.30ರ ಸುಮಾರಿಗೆ ಘಟನೆ ನಡೆದಿದ್ದು, ಗಾಯಗೊಂಡ ಯುವಕನಿಗೆ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ.
ಶನಿವಾರ ರಾತ್ರಿ ಹಳಿ ದಾಟುವ ಸಂದರ್ಭದಲ್ಲಿ ಅಡ್ಡವಿದ್ದ ಗೂಡ್ಸ್ ರೈಲು ದಾಟುವ ಸಂದರ್ಭದಲ್ಲಿ ಏಕಾಏಕಿ ರೈಲು ಚಲಿಸಿದ್ದ, ನಿಯಂತ್ರಣ ತಪ್ಪಿಬಿದ್ದ ಹೇಮಂತ್ ಕುಮಾರ್ ಕಾಲು ರೈಲಿನ ಚಕ್ರಕ್ಕೆ ಸಿಲುಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ರೈಲ್ವೆ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಈ ಕುರಿತು ಎನ್ಸಿಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.