ಪ್ರಯಾಗ್ ರಾಜ್: ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ (Maha Kumbhamela) ಇಲ್ಲಿಯವರೆಗೆ 50 ಕೋಟಿಗೂ ಅಧಿಕ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಉತ್ತರಪ್ರದೇಶ ಸರ್ಕಾರ ಅಧಿಕೃತ ಮಾಹಿತಿ ನೀಡಿದ್ದು, ಇದು ಯಾವುದೇ ಧಾರ್ಮಿಕ, ಸಾಂಸ್ಕೃತಿಕ ಅಥವಾ ಸಾಮಾಜಿಕ ಕಾರ್ಯಕ್ರಮಕ್ಕಾಗಿ ಮಾನವೇತಿ ಹಾಸದಲ್ಲೇ ಸೇರಿದ ಅತಿ ದೊಡ್ಡ ಸಭೆ ಎಂದಿದೆ.
ಭಾರತ, ಚೀನಾ ಹೊರತು ಪಡಿಸಿ ಉಳಿದೆಲ್ಲಾ ದೇಶಗಳ ಜನ ಸಂಖ್ಯೆಯನ್ನೂ ಇದು ಮೀರಿಸಿದೆ ಎಂದು ತಿಳಿಸಿದೆ.
ಶುಕ್ರವಾರ ಒಂದೇ ದಿನ 92 ಲಕ್ಷಕ್ಕೂ ಅಧಿಕ ಮಂದಿಸಂಗಮದಲ್ಲಿ ಮಿಂದೆದ್ದಿದ್ದಾರೆ.
ಜ.13ಕ್ಕೆಶುರುವಾದ ಕುಂಭಮೇಳವು ಫೆ.26ರಂದು ಮುಕ್ತಾಯಗೊಳ್ಳಲಿದೆ.
40-45 ಕೋಟಿ ಜನರು ಕುಂಭಮೇಳಕ್ಕೆ ಆಗಮಿಸಬಹುದು ಎಂದು ಸರ್ಕಾರ ಅಂದಾಜಿಸಿತ್ತು.