Site icon Harithalekhani

Doddaballapura: ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ ದುರ್ಮರಣ..!

Doddaballapura: Boy drowned in farm pit..!

Doddaballapura: Boy drowned in farm pit..!

ದೊಡ್ಡಬಳ್ಳಾಪುರ (Doddaballapura): ಗೆಳೆಯರೊಂದಿಗೆ ತೋಟಕ್ಕೆ ತೆರಳಿದ ಬಾಲಕ ಕೃಷಿಹೊಂಡದಲ್ಲಿ ಈಜಲು ಹೋಗಿ, ನೀರಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ತಾಲೂಕಿನ ಗಂಟಿಗಾನಹಳ್ಳಿ ಹೊರವಲಯದಲ್ಲಿ ನಡೆದಿದೆ.

ಮೃತ ಬಾಲಕನನ್ನು ತೂಬಗೆರೆ ನಿವಾಸಿ ವೀರಾಜು ಅವರ ಪುತ್ರ 13 ವರ್ಷದ ನಾಗೇಶ್ ಎಂದು ಗುರುತಿಸಲಾಗಿದೆ.

ಮೃತನ್ನು ತೂಬಗೆರೆಯ ಸರ್ಕಾರಿ ಶಾಲೆಯಲ್ಲಿ 09 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.

ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಶಾಲೆಗೆ ತೆರಳ ನಾಗೇಶ್, ಇಬ್ಬರು ಗೆಳೆಯರೊಂದಿಗೆ ಗಂಟಿಗಾನಹಳ್ಳಿ ಹೊರವಲಯದ ಖಾಸಗಿಯವರ ತೋಟಕ್ಕೆ ತೆರಳಿದ್ದು, ಈ ವೇಳೆ ಉಳಿದಿಬ್ಬರು ಸೆಪೇ ಕಾಯಿ ಕೀಳು ಮುಂದಾದ ವೇಳೆ, ನಾಗೇಶ್ ಈಜಾಡುವೆ ಎಂದು ಕೃಷಿ ಹೊಂಡಕ್ಕೆ ದುಮುಕಿದ್ದಾನೆ. ಆದರೆ, ಈಜು ಬಾರದೆ ನೀರಿನಲ್ಲಿ ಮುಳುಗಿದ್ದಾನೆ.

ಇದನ್ನು ಕಂಡ ಗೆಳೆಯರು ಕೂಗಿ ಕೊಂಡಿದ್ದು ಅಕ್ಕಪಕ್ಕದಲ್ಲಿದ್ದವರು ದೌಡಾಯಿಸಿ ನಾಗೇಶನ ಜೀವ ಉಳಿಸಲು ಶ್ರಮಿಸಿದ್ದಾರೆ ಆದರೆ ಅಷ್ಟರಲ್ ಆಗಲೇ ನಾಗೇಶ್ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಇನ್ನೂ ಘಟನ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿರ್ಲಕ್ಷ್ಯದ ಆರೋಪ

ಕೃಷಿ ಹೊಂಡಗಳಿಂದಾಗಿ ಪದೇ ಪದೇ ಸಾವುಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ, ಕೃಷಿ ಹೊಂಡಗಳಿಗೆ ತುರ್ತು ಸಂದರ್ಭದಲ್ಲಿ ರಕ್ಷಣೆಗೆ ನೆರವಾಗುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಅದನ್ನು ಕೃಷಿ ಹಾಗೂ ತೋಟಗಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕೆಂಬ ಆದೇಶವಿದೆ.

ಆದರೆ ಈ ಆದೇಶ.. ಆದೇಶಕ್ಕೆ ಮಾತ್ರ ಸೀಮೀತವಾಗುತ್ತಿದ್ದು, ಈ ರೀತಿ ಸಾವುಗಳು ಸಂಭವಿಸಿದಾಗ ಗಡಿಬಿಡಿ ಮಾಡುವ ಅಧಿಕಾರಿಗಳು ಅದನ್ನು ಸಂಪೂರ್ಣವಾಗಿ ಮರೆಯುತ್ತಿರುವ ಕಾರಣ ಈ ರೀತಿಯ ಘಟನೆಗಳು ಸಂಭವಿಸಲು ಕಾರಣವಾಗುತ್ತಿದೆ.

ಕೃಷಿಹೊಂಡಕ್ಕಾಗಿ ಸರ್ಕಾರದ ಸೌಲಭ್ಯ ಪಡೆಯುವ ವೇಳೆ ಸೂಕ್ತ ಪರಿಶೀಲನೆ ನಡೆಸಿ, ರೈತರಿಗೆ ಸಲಹೆ ನೀಡಿದರೆ ಈ ರೀತಿಯ ಅವಘಡಗಳನ್ನು ತಡೆಯಬಹುದು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Exit mobile version