Site icon Harithalekhani

Doddaballapura: ಮಿತಿಮೀರಿದ ವೇಗ ತಂದ ಆಪತ್ತು.. ಯುವಕ ದುರ್ಮರಣ..!

Doddaballapura: Accident.. Teacher seriously injured..!

Doddaballapura: Accident.. Teacher seriously injured..!

ದೊಡ್ಡಬಳ್ಳಾಪುರ (Doddaballapura): ದ್ವಿಚಕ್ರ ವಾಹನದಲ್ಲಿ ವೇಗವಾಗಿ ಬಂದ ಯುವಕನೋರ್ವ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು (Accident) ಸಾವನಪ್ಪಿರುವ ಘಟನೆ ತಾಲೂಕಿನ ರಾಜಘಟ್ಟ- ದಾಸಗೊಂಡನಹಳ್ಳಿ ನಡುವೆ ಸಂಭವಿಸಿದೆ.

ಮೃತ ಯುವಕನನ್ನು ಫಾಕ್ಸಕಾನ್ ಉದ್ಯೋಗಿ ಎನ್ನಲಾಗುತ್ತಿರುವ ಕೇರಳ ಮೂಲದ ಹರ್ಷದ್‌ (23 ವರ್ಷ) ಎಂದು ಗುರುತಿಸಲಾಗಿದೆ.

ನಂದಿ ಬೆಟ್ಟದ ಕಡೆಯ ಗೆಸ್ಟ್ ರೂಂಗೆ ತೆರಳುವ ವೇಳೆ ಇಂದು ಬೆಳಗ್ಗೆ ಸುಮಾರು 6:30ರ ಸಮಯದಲ್ಲಿ ಅಪಘಾತ ಸಂಭವಿಸಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಮಾರ್ಗ ಮಧ್ಯೆದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version