ಬೆಂಗಳೂರು (Bengaluru): ಚಲಿಸುತ್ತಿದ್ದ ಕಾರಿನ ಹಿಂಭಾಗದ ಸೇಫ್ಟಿ ಗಾರ್ಡ್ ಮೇಲೆ ನಿಂತು ಹುಚ್ಚಾಟವಾಡಿ, ಹುಚ್ಚು ಸಾಹಸ ಮಾಡುತ್ತಿದ್ದ ಪುಂಡ ಯುವಕರಿಬ್ಬರಿಗೆ, ಸಂಚಾರಿ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ.
ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ನಾಗರಬಾವಿ ಹೊರ ವರ್ತುಲ ರಸ್ತೆಯಲ್ಲಿ ಸುಮ್ಮನಹಳ್ಳಿ ಕಡೆಯಿಂದ ನಾಯಂಡಹಳ್ಳಿ ಕಡೆಗೆ ಹೋಗುತ್ತಿದ್ದ ಕಾರಿನಲ್ಲಿ ಯುವಕರಿಬ್ಬರು ಹಿಂಭಾಗದ ಸೇಫ್ಟಿ ಗಾರ್ಡ್ ಮೇಲೆ ನಿಂತು ಅತ್ಯಂತ ನಿರ್ಲಕ್ಷ್ಯದಿಂದ ಕಾರು ಚಾಲನೆ ಮಾಡುತ್ತಿದ್ದುದು ಕಂಡುಬಂದಿದೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.
ಈ ಘಟನೆ ಬಗ್ಗೆ ಎಚ್ಚೆತ್ತ ಬೆಂಗಳೂರು ಪೊಲೀಸರು ಕಾರಿನ ಚಾಲಕ ಸೇರಿ ಮೂವರು ಪುಂಡರನ್ನು ಬಂಧಿಸಿ ಕಠಿಣ ಕ್ರಮ ಕೈಗೊಂಡಿದ್ದಾರೆ.
ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೊಲೀಸರು, ನಿಮ್ಮ ಸಾಹಸದ ಕಲ್ಪನೆಯು ರಸ್ತೆಯಲ್ಲಿ ಇತರರಿಗೆ ಅಪಾಯವನ್ನುಂಟು ಮಾಡುತ್ತಿದ್ದರೆ, ಅನಿರೀಕ್ಷಿತ ದಾರಿಗೆ ಸಿದ್ಧರಾಗಿ.
ಅದುವೇ ಪೊಲೀಸ್ ಠಾಣೆಗೆ! ಸುರಕ್ಷತೆ ಸಲಹೆಯಲ್ಲ ಇದು ಕಾನೂನು ಎಂದು ಪೊಲೀಸರು ಬರೆದು ಎಚ್ಚರಿಕೆ ನೀಡಿದ್ದಾರೆ.