ಬೆಂಗಳೂರು: ಕೋವಿಡ್ ಹಗರಣದ ಹಣವನ್ನು ತಮಿಳುನಾಡಿನ ಮೈಕ್ರೋಫೈನಾನ್ಸ್ ಗೆ ನೀಡಿದ್ದಾರೆ ಎಂದು ಆರೋಪಿಸಿದ್ದ ಚಿಕ್ಕಬಳ್ಳಾಪುರ ಬಿಜೆಪಿ ಮುಖಂಡ ಸಂದೀಪ್ ರೆಡ್ಡಿ (Sandeep reddy) ಅವರಿಗೆ, 6 ತಿಂಗಳ ಒಳಗಾಗಿ ಆರೋಪ ಸಾಬೀತು ಮಾಡುವಂತೆ ಸಂಸದ ಡಾ ಕೆ ಸುಧಾಕರ್ (Dr K Sudhkar) ಸವಾಲು ಎಸೆದಿದ್ದಾರೆ.
ಸಂದೀಪ್ ರೆಡ್ಡಿ ಆರೋಪಗಳ ಕುರಿತು ಸುದ್ದಿಗಾರರ ಪ್ರಶ್ನೆ ಉತ್ತರಿಸಿದ ಸುಧಾಕರ್, ಬಹಳ ದೊಡ್ಡವರ ಬಗ್ಗೆ, ಆಗರ್ಭ ಶ್ರೀಮಂತರ ಬಗ್ಗೆ, ಪಟೇಲರ ಬಗ್ಗೆ ನಾ ಏನು ಮಾತಾಡಲು ಹೋಗುವುದಿಲ್ಲ.
ನಾ ಯಾವ ವ್ಯಕ್ತಿಯ ಬಗ್ಗೆ ಅಂದು ಮಾತನಾಡಿಲ್ಲ. ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ, ಅದರ ಅನ್ವಯ ಆಯ್ಕೆಯಾಗಬೇಕು ಎಂದಿದ್ದೇನೆ ಹೊರತು, ನಾ ಹೇಳಿದವರೇ ಆಗಬೇಕು ಎಂಬಂತೆ ವರ್ತಿಸಿಲ್ಲ. ಗ್ರಾಪಂ ಸದಸ್ಯರನ್ನೂ ಕೂಡ ಆ ಊರಿನ ಎಲ್ಲಾ ಮುಖಂಡರ ಒಪ್ಪಿಗೆ ಮೇರೆ ಆಯ್ಕೆ ಮಾಡಲಾಗಿದೆ. ಅದಕ್ಕೆ ಜನ ಅಧಿಕಾರ ಇರಲಿ, ಇಲ್ಲದೆ ಇರಲಿ ನನ್ನೊಂದಿಗೆ ಇದ್ದಾರೆ.
ಕ್ಯಾಮೆರಾ ಮುಂದೆ ಎಲ್ಲರೂ ಮಾತಾಡಬಹುದು. ಆದರೆ ಎಲ್ಲ ವಿಷಯಗಳನ್ನು ಕೂಲಂಕುಷವಾಗಿ ಅರ್ಥಮಾಡಿಕೊಳ್ಳಬೇಕು. ರಾಜಕಾರಣಿ ಆಗಲು ಬಯಸುವ ಯುವಕರಿಗೆ ನಾ ಕಿವಿಮಾತು ಹೇಳುವೆ ಮಾತು ಕೊನೆಯಾಗಿ ಇಟ್ಟುಕೊಳ್ಳಿ, ಕೃತಿ ಮುಂದೆ ಇರಲಿ. ಮಾತಿನಿಂದ ಏನು ಆಗಲ್ಲ, ಮಾತು ಕಡಿಮೆಯಾದರೆ ಅವರಿಗೆ ರಾಜಕಾರಣದಲ್ಲಿ ಗೌರವ ಕೊಡ್ತಾರೆ.
ಎರಡನೇದಾಗಿ ತಮಿಳುನಾಡಿನ ಮೈಕ್ರೋಫೈನಾನ್ಸ್ ಗೆ ಕೋಟ್ಯಾಂತರ ರೂ. ನೀಡಿರುವ ಆರೋಪ ಮಾಡಿದ್ದಾರೆ, ಮಾಧ್ಯಮಗಳ ಮೂಲಕ ಅವರಿಗೆ ಪ್ರಾರ್ಥನೆ ಮಾಡ್ತಿನಿ ತಕ್ಷಣ ಮೈಕಲ್ವಕುನ್ಃ ಅವರಿಗೆ, ಲೋಕಾಯುಕ್ತ ಮತ್ತು ಹಣದ ವರ್ಗಾವಣೆ ಎಂದರೆ ಇಡಿಗೆ ಬರುತ್ತೆ ಅದಕ್ಕೆ ನನ್ನ ಮೇಲೆ ದೂರು ನೀಡಬೇಕು.
6 ತಿಂಗಳ ಒಳಗಾಗಿ ಆರೋಪ ಸಾಬೀತು ಮಾಡಬೇಕು, ಇಲ್ಲವಾದರೆ ನಿಮಗೆ ಸೌಜನ್ಯ ಇದ್ದರೆ, ಮನುಷ್ಯತ್ವ ಅನ್ನೋದ್ ಇದ್ದರೆ, ಪಟೇಲ್ ತನ ಅನ್ನೋದ್ ಇದ್ದರೆ ಕನ್ನಡಿಗರ ಮುಂದೆ ಬೇಷರತ್ ಕ್ಷಮೆಯಾಚಿಸಬೇಕು ಸಂದೀಪ್ ರೆಡ್ಡಿ ಅವರಿಗೆ ಸಂಸದ ಡಾ ಕೆ ಸುಧಾಕರ್ ಸವಾಲೆಸೆದರು.