ಬೆಂಗಳೂರು: ಮೈಸೂರಿನ ಉದಯಗಿರಿ ಹಿಂಸಾಚಾರಕ್ಕೆ ಸಂಚು ರೂಪಿಸಿದ ಮತ್ತು ಪ್ರಚೋದನೆ ನೀಡಿದ ಮೌಲ್ವಿಯನ್ನು ಬಂಧಿಸಲು ಪೋಲಿಸರು ಶೋಧ ನಡೆಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಒತ್ತಾಯಿಸಿದ್ದಾರೆ.
ಕಲ್ಲು ತೂರಾಟ ಘಟನೆ ಪರಿಣಾಮವಾಗಿ ಪ್ರಚೋದನಾ ಕಾರಿ ಭಾಷಣ ಮಾಡಿದ್ದ ಮುಫ್ರಿ ಮುಸ್ತಾಕ್ ಮಕ್ಟೋಲಿ ಎಂಬಾತನಿಗಾಗಿ ಪೊಲಿಸರು ಹುಡುಕಾಟ ನಡೆಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಯತ್ನಾಳ್,
ಕಲ್ಲು ತೂರಾಟ, ಸಾರ್ವಜನಿಕ ಮತ್ತು ಪೊಲೀಸ್ ಆಸ್ತಿಗಳಿಗೆ ಹಾನಿ ಮಾಡಿದ ಆರೋಪದ ಮೇಲೆ ಅವರ ವಿರುದ್ಧ ಜಾಮೀನು ರಹಿತ ಪ್ರಕರಣಗಳನ್ನು ದಾಖಲಿಸಬೇಕು ಮತ್ತು ಹಾನಿಯ ವೆಚ್ಚವನ್ನು ಅವರಿಂದ ವಸೂಲಿ ಮಾಡಬೇಕು.
ಸಾರ್ವಜನಿಕ ಆಸ್ತಿಯಿಂದ ಹಾನಿಯನ್ನು ವಸೂಲಾತಿಗೆ ಹೆದರಿ ಯಾರೂ ಕಲ್ಲೆಸೆಯಲು ಧೈರ್ಯ ಮಾಡಬಾರದು ಎಂಬ ಮಾನದಂಡವನ್ನು ಸರ್ಕಾರ ನಿಗದಿಪಡಿಸಬೇಕು.
ಕಲ್ಲು ತೂರಾಟಗಾರರು ಸರ್ಕಾರದಿಂದ ಪಡೆದ ಎಲ್ಲಾ ಸೌಲಭ್ಯಗಳನ್ನು ತಕ್ಷಣವೇ ಜಾರಿಗೆ ಬರುವಂತೆ ರದ್ದುಗೊಳಿಸಬೇಕೆಂದು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.