ಹೈದರಾಬಾದ್: ಇತ್ತೀಚೆಗೆ ತೆಲುಗು ಚಿತ್ರರಂಗದ ಸುಪ್ರಸಿದ್ಧ ನಟ ಚಿರಂಜೀವಿಯವರು (Chiranjeevi) ನೀಡುತ್ತಿರುವ ಹೇಳಿಕೆಗಳು ವ್ಯಾಪಕವಾಗಿ ಟೀಕೆಗೆ, ಟ್ರೋಲ್ಗೆ ಒಳಗಾಗುತ್ತಿವೆ.
ಅದರ ಮುಂದುವರಿದ ಅಧ್ಯಾಯವಾಗಿ, ನಮ್ಮ ವಂಶ ಮುಂದುವರೆಸಲು ಗಂಡು ಮಗು ಬೇಕಿದೆ. ಆದರೆ ತನ್ನ ಮಗನಿಗೆ ಮುಂದಿನದ್ದೂ ಹೆಣ್ಣು ಮಗು ಆದೀತೆಂದು ಚಿಂತೆಯಾಗುತ್ತಿದೆ ಎಂದಿರುವ ಮಾತು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಕಾರ್ಯ ಕ್ರಮವೊಂದರಲ್ಲಿ ಚಿರಂಜೀವಿ ತಮ್ಮ ಮೊಮ್ಮಗಳೊಂದಿಗಿರುವ ಚಿತ್ರ ತೋರಿಸಿದಾಗ, ‘ನಮ್ಮ ಮನೆ ಮಹಿಳೆಯರ ಹಾಸ್ಟೆಲ್ ಆಗಿದೆ’ ಎಂದು ತಮಾಷೆ ಮಾಡಿದ್ದಾರೆ.
‘ಈ ಬಾರಿಯಾದರೂ ರಾಮ್ ಚರಣ್ ಒಂದು ಗಂಡು ಮಗುವಿಗೆ ಜನ್ಮ ನೀಡು, ಪರಂಪರೆ ಮುಂದುವರೆಸಿಕೊಂಡು ಹೋಗುವಂತಾಗಲಿ. ಆದರೆ ಅವರಿಗೆ ಮುಂದಿನದ್ದೂ ಹೆಣ್ಣೆ ಆದೀತೆಂದು ಚಿಂತೆಯಾಗುತ್ತಿದೆ’ ಎಂದರು.
ಚಿರಂಜೀವಿ ಹೇಳಿಕೆ ಟ್ವಿಟರ್ ನಲ್ಲಿ ವಿರೋಧ ವ್ಯಕ್ತವಾಗಿದ್ದು, ‘ಇದು ಗಂಡಿಗೆ ಆದ್ಯತೆಯ ಮನಸ್ಥಿತಿ ತೋರಿಸುತ್ತದೆ’ 2025 ರಲ್ಲಿ, ಪುರುಷ ಉತ್ತರಾಧಿಕಾರಿಯ ಗೀಳು ಮುಂದುವರಿಯುತ್ತದೆ ಎಂಬ ಆಕ್ರೋಶ ವ್ಯಕ್ತವಾಗಿದೆ.