Site icon Harithalekhani

ಬಮೂಲ್ ಸ್ಪರ್ಧೆ: ಬಿಜೆಪಿ ಮುಖಂಡರ ಒತ್ತಡ ನೂರಕ್ಕೆ ನೂರು ಸತ್ಯ; ಹುಸ್ಕೂರು ಆನಂದ್

Bamul competition: BJP leaders' pressure is 100% true; Hushkoor Anand

Bamul competition: BJP leaders' pressure is 100% true; Hushkoor Anand

ದೊಡ್ಡಬಳ್ಳಾಪುರ (Doddaballapura): ಬಮೂಲ್ ನಿರ್ದೇಶಕರ ಸ್ಥಾನಕ್ಕೆ ಎನ್‌ಡಿಎ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಬಿಜೆಪಿ ಮುಖಂಡರು, ಡೈರಿಗಳ ಅಧ್ಯಕ್ಷರು ಒತ್ತಡ ಹೇರುತ್ತಿರುವುದು ನೂರಕ್ಕೆ ನೂರು ಸತ್ಯ ಎಂದು ಜೆಡಿಎಸ್ ಹಿರಿಯ ಮುಖಂಡ ಹುಸ್ಕೂರು ಆನಂದ್ (Huskur Ananad) ಹೇಳಿದ್ದಾರೆ.

ಹುಸ್ಕೂರು ಆನಂದ್ ಅವರು ಸ್ಪರ್ಧೆ ಮಾಡುವಂತೆ ಬಿಜೆಪಿಯ ಯಾವುದೇ ಮುಖಂಡರು, ಅಧ್ಯಕ್ಷರು ಒತ್ತಡ ಹೇರಿಲ್ಲ ಎಂಬುದಾಗಿ ದೊಡ್ಡಬಳ್ಳಾಪುರ ಬಿಜೆಪಿ ಅಧ್ಯಕ್ಷ ಕೆ ನಾಗೇಶ್ (K Nagesh) ಅವರ ಸ್ಪಷ್ಟನೆ ಕುರಿತು ಅವರು ಈ ರೀತಿ ಹೇಳಿದ್ದಾರೆ.

ಬಿಜೆಪಿಯಲ್ಲಿ ಬಣ ಬಡಿದಾಟ ರಾಜ್ಯ ಮಟ್ಟದಲ್ಲಿದ್ದಂತೆ ತಾಲೂಕಿನಲ್ಲಿ ಕೂಡ ಮಿತಿ ಮೀರಿದೆ.. ಇದಕ್ಕೆ ಪಿಎಲ್ಡಿ ಬ್ಯಾಂಕ್ ಚುನಾವಣೆ ಸಾಕ್ಷಿಯಾಗಿದ್ದು, ಎನ್‌‌ಡಿಎ ಮೈತ್ರಿ ಅಡಿಯಲ್ಲಿ ಜೆಡಿಎಸ್ ಪಕ್ಷದಿಂದ ನಾಮಪತ್ರ ಹಿಂಪಡೆದಿದ್ದೇವೆ. ಆದರೆ ಬಿಜೆಪಿಗರೇ ಜಿದ್ದಾಜಿದ್ದಿಗೆ ಬಿದ್ದು ಚುನಾವಣೆಗೆ ಇಳಿದಿದ್ದಾರೆ.

ನಾ ಬಿಜೆಪಿಯ ಯಾವುದೇ ಅಧ್ಯಕ್ಷ ಒತ್ತಡ ಹೇರಿದ್ದಾರೆ ಎಂದು ಹೇಳಿಲ್ಲ, ಡೈರಿಗಳ ಅಧ್ಯಕ್ಷರು ಎಂಬುದು ನನ್ನ ಹೇಳಿಕೆಯಾಗಿದೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡರೆ ನಾ ಹೊಣೆಯಲ್ಲ.

ಬಮೂಲ್ ನಿರ್ದೇಶಕರ ಸ್ಥಾನಕ್ಕೆ ಬಿಜೆಪಿಯ ಅನೇಕ ಮುಖಂಡರು ಒತ್ತಡ ಹೇರುತ್ತಿರುವುದು ಸತ್ಯ. ಈ ಕುರಿತು ಉದ್ಬವಿಸಿರುವ ಕೆಲ ಪ್ರಶ್ನೆಗಳಿಗೆ ಸವಿಸ್ತಾರವಾಗಿ ಮಾಹಿತಿ ನೀಡಬೇಕಿದೆ.

ಇದನ್ನೂ ಓದಿ; ಬಮೂಲ್ಗೆ ಸ್ಪರ್ಧೆ: ಹುಸ್ಕೂರು ಆನಂದ್ ಹೇಳಿಕೆ ಅಲ್ಲಗೆಳೆದ ಬಿಜೆಪಿ ಅಧ್ಯಕ್ಷ ನಾಗೇಶ್..!

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗಿಯಾಗಲು ತೆರಳುತ್ತಿದ್ದೇನೆ‌, ಅಲ್ಲಿಂದ ಬಂದ ಬಳಿಕ ಮತ್ತೊಂದು ಪ್ರಮುಖವಾದ ವಿಷಯ ತಿಳಿಸುವುದಾಗಿ ಹುಸ್ಕೂರು ಆನಂದ್ ಅವರು ಕುತೂಹಲ ಮೂಡಿಸಿದ್ದಾರೆ.

Exit mobile version