ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಚಿಕ್ಕ ಚಿಕ್ಕ ಮಕ್ಕಳು ಆತ್ಮಹತ್ಯೆ (Suicide) ಮಾಡಿಕೊಳ್ಳುತ್ತಿರುವ ಪ್ರಕರಣ ತೀವ್ರವಾಗುತ್ತಿದ್ದು, ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಪರೀಕ್ಷೆ ಇದೆ ಮೊಬೈಲ್ ಬಿಟ್ಟು ಓದಮ್ಮ ಎಂದು ತಾಯಿ ಬುದ್ದಿ ಹೇಳಿದಕ್ಕೆ 20ನೇ ಮಹಡಿಯಿಂದ ಜಿಗಿದು SSLV ವಿದ್ಯಾರ್ಥಿನಿ ಕಾಡುಗೋಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರೆ, ಗುಟ್ಕ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಬುದ್ದಿ ಹೇಳಿದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ವರದಿಯಾಗಿದೆ.
ವಿದ್ಯಾರ್ಥಿನಿ ಆತ್ಮಹತ್ಯೆ
ಅಪಾರ್ಟ್ಮೆಂಟ್ನ 20ನೇ ಮಹಡಿಯಿಂದ ಜಿಗಿದು 15 ವರ್ಷದ SSLC ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಕಾಡುಗೋಡಿಯ ಅಸೆಟ್ಸ್ ಮಾರ್ಕ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
15 ವರ್ಷದ ಅವಂತಿಕಾ ಚೌರಾಸಿಯಾ ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಎಂದು ಗುರುತಿಸಲಾಗಿದೆ.
ಮಧ್ಯಪ್ರದೇಶ ಮೂಲದ ಕುಟುಂಬದ ಬಾಲಕಿಯ ತಂದೆ ಖಾಸಗಿ ಕಂಪನಿಯ ಇಂಜಿನಿಯರ್ ಆಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ.
ಕಾಡುಗೋಡಿ ಖಾಸಗಿ ಶಾಲೆಯಲ್ಲಿ ಬಾಲಕಿ ಅವಂತಿಕಾ ಚೌರಾಸಿಯಾ ಎಸ್ಎಸ್ಎಲ್ಸಿ ಓದುತ್ತಿದ್ದಳು. ಕಳೆದ ಪರಿಕ್ಷೆಯಲ್ಲಿ ಅವಂತಿಕಾ ಸರಳವಾದ ಅಂಕ ಪಡೆದಿದ್ದಳು. ಈ ನಡುವೆ 15ನೇ ತಾರೀಖಿನಿಂದ ಪರೀಕ್ಷೆ ಸಹ ಶುರುವಾಗಲಿದೆ. ಈ ನಡುವೆ ಮನೆಯಲ್ಲಿ ಮೊಬೈಲ್ ಹಿಡಿದುಕೊಂಡು ಕುಳಿತಿದ್ದಳಂತೆ.
ಇದನ್ನು ಕಂಡು ತಾಯಿ ಬುದ್ಧಿಮಾತು ಹೇಳಿದ್ದಾರೆ. ಪರೀಕ್ಷೆ ಬರುತ್ತಿದೆ ಓದುವುದು ಬಿಟ್ಟು ಮೊಬೈಲ್ನಲ್ಲಿ ಇರ್ತಿಯಾ ಎಂದು ತಾಯಿ ಬೈದಿದ್ದಾರೆ. ಈ ಮಾತು ಕೇಳಿ ಬಳಿಕ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಗುಟ್ಕ ಆರೋಗ್ಯಕ್ಕೆ ಒಳ್ಳೆದಲ್ಲ ಎಂದಿದಕ್ಕೆ ಆತ್ಮಹತ್ಯೆ
ಮತ್ತೊಂದು ಪ್ರಕರಣದಲ್ಲಿ ನೀನಿನ್ನೂ ಚಿಕ್ಕವಳು. ನಿನ್ನ ಜೀವನದ ಆಯಸ್ಸು ತುಂಬಾ ಹೆಚ್ಚಾಗಿದೆ. ಹೀಗಾಗಿ ಇಷ್ಟು ಸಣ್ಣ ವಯಸ್ಸಿನಲ್ಲಿ ತಂಬಾಕು ಸೇವನೆ ಮಾಡುವುದು ಒಳ್ಳೆಯದಲ್ಲ ಎಂದು ಬುದ್ದಿ ಹೇಳಿದ್ದಕ್ಕೆ ಮನನೊಂದ ಯುವತಿ ಒಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಈ ಘಟನೆ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.
18 ವರ್ಷದ ಬೀಬಿಜಾನ್ ಸೊಂಡಿ ನೇಣಿಗೆ ಶರಣಾದ ಯುವತಿ ಎನ್ನಲಾಗಿದೆ.
ಈಕೆ ಕಳೆದ ಕೆಲವು ದಿನಗಳಿಂದ ತಂಬಾಕು ಸೇವನೆಯ ಚಟಕ್ಕೆ ಸಿಕ್ಕಿಹಾಕಿಕೊಂಡಿದ್ದಾಳೆ. ಹೀಗಾಗಿ ಆಕೆಯ ತಂದೆ-ತಾಯಿ ತಂಬಾಕು ಸೇವನೆ ಮಾಡುವುದನ್ನು ಬಿಡುವಂತೆ ಬುದ್ಧಿವಾದ ಹೇಳಿದ್ದರಂತೆ.
ಮನೆಗೆಲಸ ಮಾಡುತ್ತಿದ್ದ ಬೇಬಿಜಾನ್ ನಾನು ದುಡಿಮೆ ಮಾಡಿ ನನ್ನ ಸ್ವಂತ ಹಣದಲ್ಲಿ ಖರ್ಚು ಮಾಡಲು ಅಪ್ಪ-ಅಮ್ಮ ಬಿಡುತ್ತಿಲ್ಲ ಎಂದು ಜಗಳವಾಡಿದ್ದಾಳೆ.
ನೀನಿನ್ನೂ ಚಿಕ್ಕವಳು. ಆದ್ದರಿಂದ ತಂಬಾಕು ಸೇವನೆ ಬಿಟ್ಟು ನಿನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಪೋಷಕರು ಬೈದು ಮತ್ತೊಮ್ಮೆ ಬುದ್ಧಿವಾದ ಹೇಳಿದ್ದಾರೆ.
ಇಷ್ಟಕ್ಕೆ ಮನನೊಂದ ಬೀಬಿಜಾನ್ ನೊಂದು ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ವರದಿಯಾಗಿದೆ.
ಘಟನೆ ಕುರಿತು ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.